ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು ಮಹಾಮಾರಿಗೆ ಲಗಾಮು ಹಾಕಲು ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಕಾರ್ಯಾಚರಣೆ ನಡೆಸಿದೆ.
ಬೆಳಗಾವಿ ಮಹಾನಗರದಲ್ಲಿ ಮಾಸ್ಕ ಹಾಕದೇ ಸುತ್ತಾಡುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸುವ ಕಾರ್ಯಾಚರಣೆ ನಡೆಸಿದ್ದು ನಿನ್ನೆ 38 ಸಾವಿರ ರೂ ದಂಡ ವಸೂಲಿ ಮಾಡಿದ್ರೆ ಇಂದು ಶುಕ್ರವಾರ ಒಂದೇ ದಿನ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬರೊಬ್ಬರಿ ಒಂದು ಲಕ್ಷ ₹ ದಂಡ ವಸೂಲಿ ಮಾಡಿದ್ದಾರೆ.
ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಪಾಲಿಕೆ ಆಯುಕ್ತ ಜಗದೀಶ್,ಕಳೆದ ಎರಡು ದಿನಗಳಿಂದ ಬೆಳಗಾವಿ ಮಹಾನಗರದಲ್ಲಿ ಮಾಸ್ಕ ಹಾಕಿಕೊಳ್ಳದೇ ಸುತ್ತಾಡುವವರನ್ನು ಗುರುತಿಸಿ ದಂಡ ವಿಧಿಸುವ ಕಾರ್ಯಾಚರಣೆ ನಡೆಯುತ್ತಿದೆ.ಇಂದು ಶುಕ್ರವಾರ ಪಾಲಿಕೆಯ ಆರೋಗ್ಯ ವಿಭಾಗ,ಮತ್ತು ಕಂದಾಯ ವಿಭಾಗದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಒಂದು ಲಕ್ಷ ರೂ ದಂಡ ವಸೂಲಿ ಮಾಡಿದ್ದಾರೆ.
ನಗರದಲ್ಲಿ ವಾಹನ ಸವಾರರು ಮತ್ತು ಪಾದಚಾರಿಗಳು,ಮಾಸ್ಕ ಹಾಕಿಕೊಳ್ಳದೇ ಸುತ್ತಾಡಿದ್ರೆ ನಮ್ಮವರು,ದಂಡ ಹಾಕ್ತಾರೆ,ಜನರಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವದಕ್ಕಾಗಿ ದಂಡ ವಸೂಲಿ ಮಾಡುವ ಅಭಿಯಾನ ಆರಂಭಿಸಿದ್ದೇವೆ.ಎಲ್ಲರೂ ಮಾಸ್ಕ ಧರಿಸಿ ಮಹಾಮಾರಿ ಕೋವೀಡ್ ನಿಂದ ರಕ್ಷಿಸಿಕೊಳ್ಳಬೇಕೆನ್ನುವದೇ ನಮ್ಮ ಕಾಳಜಿ ಆಗಿದೆ ಎಂದು ಜಗದೀಶ್ ಹೇಳಿದ್ರು
ಜನ ಜಾಗೃತರಾಗಬೇಕು,ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆನ್ನುವದೇ ನಮ್ಮ ಕಾಳಜಿಯಾಗಿದ್ದು ಜನ ಜಾಗೃತ ವಾಗುವವರೆಗೂ ಎಲ್ಲರು ಮಾಸ್ಕ ಧರಿಸಿ ಓಡಾಡುವವರೆಗೂ ದಂಡ ವಸೂಲಿ ಕಾರ್ಯಾಚರಣೆ ಮುಂದುವರೆಯುತ್ತದೆ,ಎಂದು ಪಾಲಿಕೆ ಆಯುಕ್ತ ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕ ಧರಿಸಿ
ಆರೋಗ್ಯ ಕಾಪಾಡಿಕೊಳ್ಳಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ