ಬೆಳಗಾವಿ- ಬೆಳಗಾವಿಯ ಕ್ರೈಂ ಬ್ರ್ಯಾಂಚಿನ ಪೋಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ,ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದ ಜಾಲವನ್ನು ಪತ್ತೆ ಮಾಡಿ ಬರೊಬ್ಬರಿ 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ,ಮಲ್ಲಪ್ಪ ಸಿದ್ರಾಮಣಿ ನಿಪ್ಪಾಣಿ ಸಾ! ನಾಗರಮುನ್ನೋಳಿ,ಹಾಲಿ ಮುಗುಳಖೋಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ,ಈತನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ,ಕಲ್ಬುರ್ಗಿ ಜಿಲ್ಲೆಯ ಇಬ್ಬರನ್ನು ಬಂಧಿಸಿ ಒಟ್ಟು ಎರಡುವರೆ ಲಕ್ಷ ₹ ಕಿಮ್ಮತ್ತಿನ 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಐಬಿ ಎಸಿಪಿ ನಾರಾಯಣ ಭರಮಣಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಕಾಂಬಳೆ ಅವರು ಕಾರ್ಯಾಚರಣೆ ನಡೆಸಿದ್ದರು.
ಮಾಳಮಾರುತಿ ಪೋಲೀಸರಿಂದಲೂ ರೇಡ್
ಬೆಳಗಾವಿಯ ಮಾಳ ಮಾರುತಿ ಪೋಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ.ಐದುವರೆ ಕೆಜಿ ಗಾಂಜಾ ವಶಪಡಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಪಿಐ ಗಡ್ಡೇಕರ ನೇತ್ರತ್ವದಲ್ಲಿ ದಾಳಿ ಮಾಡಿ ಅಟೋ ನಗರದಲ್ಲಿ ಗಾಂಜಾ ದಂಧೆ ನಡೆಸಿದ್ದ ಆರು ಜನರನ್ನು ಅರೆಸ್ಟ್ ಮಾಡಿದ್ದಾರೆ.ಒಂದು ಬೈಕ್ ಮತ್ತು ಹತ್ತು ಸಾವಿರ ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ.