Breaking News

ನಾಳೆ ಬೆಳಗಾವಿಯನ್ನು ರೈತರು ಶೀಲ್ ಡೌನ್ ಮಾಡ್ತಾರೆ…..!

ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ,ಮತ್ತು,ಎಪಿಎಂಸಿ ಕಾಯ್ದೆ ವಿರೋಧಿಸಿ,ವಿವಿಧ ರೈತಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು,ಬಂದ್ ಗೆ ಬೆಳಗಾವಿಯ ಕನ್ನಡಪರ,ದಲಿತಪರ,ಮತ್ತು ರೈತಪರ ,ಸಂಘಟನೆಗಳು ಬೆಂಬಲ ಸೂಚಿಸಿವೆ,

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಮಾಡಿ ನಂತರ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಂದ್ ಗೆ ಬೆಂಬಲ ವ್ಯೆಕ್ತಪಡಿಸಿದ್ದಾರೆ.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಮರಣ ಶಾಸನ ಬರೆಯಲು ಹೊರಟಿವೆ ಇದಕ್ಕೆ,ಅವಕಾಶ ಕೊಡುವದಿಲ್ಲ,ರೈತ ವಿರೋಧಿ ಶಾಸನಗಳನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿ ನಾಳೆ ಸೋಮವಾರ,ಬೆಳಗಾವಿಯ ಚನ್ನಮ್ಮನ ವೃತ್ತದಿಂದ ಸುವರ್ಣ ವಿಧಾನಸೌಧದ ವರೆಗೆ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ,ಬಿಸಿ ಮುಟ್ಟಿಸುತ್ತೇವೆ ಎಂದು ದೀಪಕ ಎಚ್ಚರಿಕೆ ನೀಡಿದ್ರು

ಅನ್ನದಾತ ಸಂಕಷ್ಟದಲ್ಲಿದ್ದು ಆತನ ಬದುಕಿಗೆ ಮಾರಕವಾಗುವ ಕಾನೂನುಗಳು ಸರ್ಕಾರಗಳು ಜಾರಿಗೆ ತಂದಿದ್ದು ಇಂತಹ ಸಂಧರ್ಭದಲ್ಲಿ ನಮಗೆಲ್ಲ ಅನ್ನ ನೀಡುವ ಅನ್ನದಾತನ ಬೆಂಬಲಕ್ಕೆ ಎಲ್ಲರೂ ನಿಲ್ಲಬೇಕು,ಹೊಟೆಲ್ ಮಾಲೀಕರು,ರಿಕ್ಷಾಚಾಲಕರು,ಅಂಗಡಿಕಾರರು ನಾಳೆ ಸೋಮವಾರ,ಬಂದ್ ಗೆ ಬೆಂಬಲ ಸೂಚಿಸಿ ತಮ್ಮ ವಹಿವಾಟು ಬಂದ್ ಮಾಡಬೇಕು ಎಂದು ದೀಪಕ ಗುಡಗನಟ್ಟಿ ಮನವಿ ಮಾಡಿಕೊಂಡರು.

ನಾಳೆ,ಬೆಳಗಾವಿ ನಗರ ಮತ್ತು ಜಿಲ್ಲೆಯನ್ನು ಸಂಪೂರ್ಣವಾಗಿ ಬಂದ್ ಮಾಡಲು ವಿವಿಧ ಸಂಘಟನೆಗಳು ನಿರ್ಧರಿಸಿದ್ದು,ಸೋಮಾರ ಶೀಲ್ ಡೌನ್ ಮಾದರಿಯ ಬಂದ್ ಬೆಳಗಾವಿಯಲ್ಲಿ ಆಗುವ ಸಾದ್ಯತೆ ಇದೆ

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *