ಬೆಳಗಾವಿ-ಮೈಕಲ್ ಜಾಂಕ್ಷನ್ ಹಾಗೆ ಡ್ಯಾನ್ಸ್ ಮಾಡುವ,ಮೇಕಪ್ ಮಾಡ್ಕೊಂಡು ಪಬ್ ಸುತ್ತಾಡುವ ರ‌್ಯಾಂಬೋ ಡಾರ್ಲಿಂಗ್ ಇದಲ್ಲ , ವಾಸನೆ ಹಿಡಿದು ಕ್ರಿಮಿನಲ್ ಗಳನ್ನು ಪತ್ತೆ ಮಾಡುವ ರ‌್ಯಾಂಬೋ ಡಾರ್ಲಿಂಗ್ ಬೆಳಗಾವಿ ನಗರ ಪೋಲೀಸ್ ಇಲಾಖೆಯ ಶ್ವಾನ ದಳದಲ್ಲಿದೆ.
ಬೆಳಗಾವಿ ಡಿಸಿಪಿ ವಿಕ್ರಮ್ ಅಮಟೆ ಇಂದು ಶ್ವಾನದಳದ ಅಧಿಕಾರಿಗಳ ಜೊತೆ,ಕೇಕ್ ಕತ್ತರಿಸಿ ರ‌್ಯಾಂಬೋ ಡಾರ್ಲಿಂಗ್ ಬರ್ತಡೇ ಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಿದ್ರು….
ರ‌್ಯಾಂಬೋ ಬರ್ತ್ ಡೇ ನಿಮಿತ್ಯ ಕೇಕ್ ಕತ್ತರಿಸಿ ಪ್ರೀತಿಯ ನಾಯಿ ರ‌್ಯಾಂಬೋ ಜನ್ಮ ದಿನವನ್ನು ಆಚರಿಸುವ ಮೂಲಕ ಸಂಬ್ರಮಿಸಿದರು,ಪೋಲೀಸ್ ಅಧಿಕಾರಿಗಳು ಕೇಕ್ ರುಚಿಯನ್ನು ಸವಿದರೆ,ರ‌್ಯಾಂಬೋ ಡಾರ್ಲಿಂಗ್ ಗೆ ಇಂದು ನಾನ್ ವೇಜ್ ರುಚಿ ತೋರಿಸಿರಬಹುದು
ಪ್ರೀತಿಯ ನಾಯಿ ರ‌್ಯಾಂಬೋ ಬರ್ತ್ ಡೇ ಕಾರ್ಯಕ್ರಮ ಇಂದು ಎಲ್ಲರ ಗಮನ ಸೆಳೆಯಿತು,ಅನೇಕ ಅಪರಾಧಗಳನ್ನು ಪತ್ತೆ ಮಾಡುವ ಮೂಲಕ,ಇಲಾಖೆಯಲ್ಲಿ ಮಹತ್ವದ ಸೇವೆ ಮಾಡುತ್ತಿರುವ ನಾಯಿಗೂ ಪೋಲೀಸ್ ಅಧಿಕಾರಿಗಳು ನೀಡಿದ ಗೌರವ ನಿಜಕ್ಕೂ ಪ್ರಶಂಸನೀಯ
ಬೆಳಗಾವಿ ಸುದ್ಧಿ ಬಳಗದ ಪರವಾಗಿಯೂ ರ‌್ಯಾಂಬೋ ಡಾರ್ಲಿಂಗ್ ಗೆ ಹ್ಯಾಪಿ ಬರ್ತ್ ಡೇ
ಬಯಸಿದಾಗಲೆಲ್ಲಾ ,ಚಿಕನ್ ಮಟನ್ ಫಿಶ್ ರ‌್ಯಾಂಬೋ ಗೆ ಸಿಗಲಿ ಎಂದು ಹಾರೈಸುತ್ತೇವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ