ಬೆಳಗಾವಿ- ಬೆಳಗಾವಿ ನಗರದಲ್ಲಿ ಹವಾರು ನಾಲೆಗಳಿವೆ,ಈ ನಾಲೆಗಳಲ್ಲಿ ಬೋಟುಗಳು ಓಡಾಡಬೇಕು,ಅನ್ನೋದು ಶಾಸಕ ಅಭಯ ಪಾಟೀಲ ಅವರ ಯೋಜನೆಯಾಗಿತ್ತು,ಈ ಯೋಜನೆ ಅನುಷ್ಠಾನ ಗೊಳಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನೀರಾವರಿ ನಿಗಮ ಬೆಳಗಾವಿ ನಗರದ ನಾಲೆಗಳನ್ನು ಸುಧಾರಿಸಿ,ನಾಲೆಗಳಲ್ಲಿ ಬೋಟುಗಳನ್ನು,ಸಿಟಿ ಬಸ್ ಗಳಂತೆ ಓಡಾಡಸಲು ಯೋಜನೆ ರೂಪಿಸಲು ಕನ್ಸಲ್ಟನ್ಸಿ ಕಂಪನಿಗೆ ಗುತ್ತಿಗೆ ನೀಡಲು ಟೆಂಡರ್ ಕರೆದಿದೆ.
ಬೆಳಗಾವಿ ನಗರದ ಲೇಂಡಿ,ನಾಲಾ,ಜಕ್ಕೇರಿ ನಾಲಾ,ನಾಗಝರಿ ನಾಲೆಗಳನ್ನು ಸುಧಾರಿಸುವ,ಬೋಟುಗಳನ್ನು ಓಡಾಡುವ ಹಾಗೆ,ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲು ಟೆಂಡರ್ ಕರೆಯಲಾಗಿದ್ದು,ಜಿಲ್ಲಾ ಉಸ್ತುವಾರಿ ಸಚಿವ,ರಮೇಶ್ ಜಾರಕಿಹೊಳಿ ಅವರು ನೀರಾವರಿ ನಿಗಮದ ಮೂಲಕವೇ ಈ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಶೇಷ ಮುತವರ್ಜಿ ವಹಿಸಿದ್ದು ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ನಗರ ನಿವಾಸಿಗಳಿಗೆ ವಿಶೇಷ ಕೊಡುಗೆ ನೀಡಿದ್ದಾರೆ.
ಇನ್ ಲ್ಯಾಂಡ್ ವಾಟರ್ ಟ್ರಾನ್ಸಪೋರ್ಟ್ ಸಿಸ್ಟಮ್ ಕೇರಳದಲ್ಲಿದೆ,ಆದ್ರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ಯೋಜನೆ ಬೆಳಗಾವಿಯಲ್ಲಿ ಅನುಷ್ಠಾನಗೊಳ್ಳುತ್ತಿರುವದು ಸಂತಸದ ಸಂಗತಿ