ಬೆಳಗಾವಿ- ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಬೆಳಗಾವಿ ಜಿಲ್ಲೆಯಲ್ಲಿ ಭಯಾನಕ ಮಳೆ ಸುರಿಯುತ್ತಿರುವ ಪರಿಣಾಮ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮೂರು ವಿಮಾನಗಳು ಲ್ಯಾಂಡಿಂಗ್ ಆಗದೇ ವಾಪಸ್ ಆಗಿವೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಇಂದು ಸೋಮವಾರ ,ಹೈದ್ರಾಬಾದ,ತಿರುಪತಿ,ಮತ್ತು ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದವರೆಗೂ ಬಂದ ವಿಮಾನಗಳು ವಿಪರೀತ ಮಳೆ ಮತ್ತು ಮುಸುಕು ಇರುವ ಕಾರಣ ಹಿಂತಿರುಗಿ ಹೋಗಿವೆ.
ಇಂದು ಬೆಳಿಗ್ಗೆ 8.50 ಕ್ಕೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಸ್ಪೈಸ್ ಜೆಟ್,9.30 ಕ್ಕೆ ತಿರುಪತಿಯಿಂದ ಆಗಮಿಸಿದ ಟ್ರೂಜೆಟ್,ಇದೇ ಸಮಯದಲ್ಲಿ ಹೈದ್ರಾಬಾದ್ ನಿಂದ ಆಗಮಿಸಿದ ಇಂಡಿಗೋ ಲ್ಯಾಂಡಿಂಗ್ ಆಗಲು ಬೆಳಗಾವಿಯಲ್ಲಿ ಅನಕೂಲ ವಾತಾವರಣ ಇಲ್ಲದ ಕಾರಣ ಆಕಾಶದಲ್ಲೇ ರೌಂಡ್ ಹೊಡೆದು ಮರಳಿ ಹೋಗಿ ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಆಗಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ