ಬೆಳಗಾವಿ- ಜೀವ ಅಂದ್ಮೇಲೆ ಹೊಟ್ಟೆಗೆ ಹಿಟ್ಡು ನೀರು ನಿದ್ದೆ ಬೇಕೆ ಬೇಕು ಆದ್ರೆ ಮನುಷ್ಯನಿಗೆ ಇಲ್ಲೇ ಊಟ ಇಲ್ಲೇ ನಿದ್ದೆ ಅನ್ನೋ ಸ್ಥಳ ಮತ್ತು ಸಮಯ ನಿಗದಿ ಆಗಿರುತ್ತೆ.
ಪಾಪ ಮೂಕ ಜೀವಿಗೆ ಇದು ಡಿಸಿ ಕಚೇರಿ ಇಲ್ಲಿ ಮಲಗಬಾರದು,ಇಲ್ಲಿ ಮಲಗಿದ್ರೆ ಕೇಸ್ ಹಾಕ್ತಾರೆ ಅನ್ನೋದು ಗೊತ್ತೆ ಇಲ್ಲ,ಪೋಲೀಸರ ಹೆದರಿಕೆಯೂ ಅವರಿಗಿಲ್ಲ,ಎಲ್ಲೋ ಹೊಟ್ಟೆತುಂಬ ತಿಂದು ಬಂದ್ಮೇಲೆ ನಿದ್ದೆ ಬಂದಿದೆ,ಹೀಗಾಗಿ ಅವರು ಡಿಸಿ ಕಚೇರಿ ಆವರಣದಲ್ಲಿ ಮಲಗಿ, ರಿಲ್ಯಾಕ್ಸ್ ಮಾಡುತ್ತಿದ್ದ ದೃಶ್ಯ ಇವತ್ತು ಎಲ್ಲರ ಗಮನ ಸೆಳೆಯಿತು
ಇಲ್ಲಿ ಯಾರ ಬೇಕಾದ್ರೂ ಗಾಡಿ ನಿಲ್ಲಿಸುತ್ತಿದ್ದಾರೆ,ಇಲ್ಲಿ ನಾವು ಮಲಗಿದ್ರೆ ಯಾರೂ ನಮಗೆ ಕಾಟ ಕೊಡೋದಿಲ್ಲ,ಯಾರೂ ನಮ್ಮನ್ನು ಕೇಳುವದಿಲ್ಲ,ಎಂದು ಹಲವಾರು ದಿನಗಳಿಂದ ವಾಚ್ ಮಾಡಿದ ಬೀದಿನಾಯಿಗಳು ಡಿಸಿ ಕಚೇರಿಯ ಆವರಣದಲ್ಲೇ ಆಶ್ರಯ ಪಡೆದಿವೆ.
ಪಾಪ ಇದರಲ್ಲಿ ಬೀದಿ ನಾಯಿಗಳ ತಪ್ಪು ಇಲ್ಲವೇ ಇಲ್ಲ,ಇಲ್ಲಿ ಯಾರ ಕಾಟವೂ ಇಲ್ಲ ಅಂತಾ ಖಾತ್ರಿಯಾದ ಮೇಲೆ ಅಲ್ಲೇ ಎಲ್ಲರೂ ಮಲಗಿದ್ದಾರೆ.
ಬೆಳಗಾವಿಯಲ್ಲಿ ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.ಮಕ್ಕಳು ಆಗದ ಹಾಗೆ ಇಷ್ಟು ದಿನ ಆಪರೇಷನ್ ಮಾಡಲಾಗುತ್ತಿತ್ತು,ಈಗ ಹಲವಾರು ವರ್ಷಗಳಿಂದ ಆಪರೇಶನ್ ಕೂಡಾ ಮಾಡುತ್ತಿಲ್ಲ ಹೀಗಾಗಿ ಇವರ ಸಂತಾನ ಹೆಚ್ಚಾಗುತ್ತಲೇ ಇದೆ,ಸಂತಾನಹರಣ ಮಾಡುವವರು ಅದನ್ನು ಮರೆತೇ ಬಿಟ್ಟಿದ್ದಾರೆ,ಹೀಗಾಗಿ ಈ ಬೀದಿ ನಾಯಿಗಳಿಗೆ ಯಾವ ತೊಂದರೆ ಇಲ್ಲದಿದ್ದರೂ ಬೀದಿ ನಾಯಿಗಳಿಂದ ಬೆಳಗಾವಿಯ ಮಕ್ಕಳು ಮನೆಯ ಅಂಗಳದಲ್ಲಿ ಆಟ ಆಡುವದು ಕಷ್ಟವಾಗಿದೆ…..
ಬೀದಿ ನಾಯಿಗಳು ಈಗ ಬೆಳಗಾವಿಯಲ್ಲಿ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.ಡೋಂಟ್ ಡಿಸ್ಟರ್ಬ್ ಅಂತಾ ಬೋರ್ಡ ಹಾಕಿ ಕಚೇರಿ,ಚೇಂಬರ್ ಗಳಲ್ಲಿ ಮಲಗುವ ಕಾಲವೂ ಬರಲಿದೆ.
ಬೆಳಗಾವಿಯಲ್ಲಿ ಡೋಂಟ್ ಕೇರ್ ಹೆಚ್ಚಾಗಿದ್ದರಿಂದಲೇ ಡೋಂಟ್ ಡಿಸ್ಟರ್ಬ್ ದೃಶ್ಯಗಳು ಸಾಮಾನ್ಯವಾಗಿದೆ.