ಬೆಳಗಾವಿ- ಬೆಳಗಾವಿ ಪೋಲೀಸರು ಮಾದಕ ವಸ್ತು ಮಾರಾಟ ಮತ್ತು ಸೇವನೆಯ ವಿರುದ್ಧ ಸಮರ ಸಾರಿದ್ದು,ಇಷ್ಟು ದಿನ ಗಾಂಜಾ ಮಾರಾಟವನ್ನು ನಿಲ್ಲಿಸಿದ ಪೋಲೀಸರು ಇಂದು ಬೆಳಗಾವಿಯ ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿದ್ದಾರೆ.
ಬೆಳಗಾವಿ ಸಿಟಿ ಕ್ರೈಂ ಬ್ರ್ಯಾಂಚಿನ ಎಸಿಪಿ ನಾರಾಯಣ ಭರಮಣಿ ಅವರ ನೇತ್ರತ್ವದಲ್ಲಿ,ಬೆಳಗಾವಿಯ ಕೃಷ್ಣ ದೇವರಾಯ ಸರ್ಕಲ್ ನಲ್ಲಿ ( ಕೊಲ್ಹಾಪೂರ ಸರ್ಕಲ್) ಹುಕ್ಕಾ ಅಂಗಡಿಯ ಮೇಲೆ ದಾಳಿ ಮಾಡಿ ಹುಕ್ಕಾ ಫ್ಲೇವರ್ ಪಾಕಿಟ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಹುಕ್ಕಾ ಮಾದಕವನ್ನು ಮಾರಾಟ ಮಾಡುತ್ತಿದ್ದ ಕಾಸರಗೋಡ ಮೂಲದ ಮೂವರನ್ನು ಬಂಧಿಸಿದ ಪೋಲೀಸರು ಅಪಾರ ಪ್ರಮಾಣದ ಹುಕ್ಕಾ ಪಾಕೇಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ