ಬೆಳಗಾವಿ-ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿಯ ರೈಲು ನಿಲ್ಧಾಣದ ಬಳಿ ಇರುವ ರೇಲ್ವೇ ಮೇಲ್ಸೆತುವೆಯ ಮೇಲೆ ವ್ಯಕ್ತಿಯಿಬ್ಬನ ಶವ ನೇತಾಡುವದನ್ನು ನೋಡಿ ಜನ ಭಯಭೀತರಾಗಿದ್ದರು.
ಆತ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..? ಆತ ಯಾರು ..? ಯಾವ ಊರಿನವನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು
ರೇಲ್ವೆ ಮೇಲ್ಸೆತುವೆಯ ಮೇಲೆ ಶವ ನೇತಾಡುವದನ್ನು ನೋಡಿದ ಜನ ರೇಲ್ವೆ ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಶೀಲನೆ ಮಾಡಿ,ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿ ಮನೋಹರ ಭೋಸಲೆ (65) ಗುರುವಾರ ಪೇಟೆ ಟಿಳಕವಾಡಿಯ ನಿವಾಸಿಯಾಗಿದ್ದು ಈತ ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ಥ, ಕಳೆದ ಒಂದು ವರ್ಷದಿಂದ ಉಪಚಾರ ಕೂಡಾ ನಡೆದಿತ್ತು ಆದ್ರೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಬಂದ ಈತ ರೇಲ್ವೆ ಬ್ರಿಡ್ಜ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ರೇಲ್ವೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ