ಬೆಳಗಾವಿ- ವೀರರಾಣಿ ಕಿತ್ತೂರು ಚನ್ನಮ್ಮ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಇಬ್ಬರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು ಅವರ,ಧೈರ್ಯ ಮತ್ತು ಸಹಾಸ ದೇಶಕ್ಕೆ ಸ್ಪೂರ್ತಿಯಾಗಿದೆ,ಆದ್ರೆ ಇವತ್ತು ರಾಯಣ್ಣ, ಮತ್ತು ಚನ್ನಮ್ಮನ ಅಭಿಮಾನಿಗಳು ಪರಸ್ಪರ ಸಂಘರ್ಷಕ್ಕೆ ಇಳಿದಿರುವದು ಅತ್ಯಂತ ದು:ಖದ ಸಂಗತಿಯಾಗಿದೆ
ರಾಯಣ್ಣ ಮತ್ತು ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯ ಕುರಿತು,ಗದಗ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ,ಹಾಲುಮತ ಸಮಾಜ ಮತ್ತು ಪಂಚಮಸಾಲಿ ಸಮಾಜದ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ನಡೆತುತ್ತಿರುವ ಈ ಸಂಘರ್ಷ ನಿನ್ನೆ ಶನಿವಾರ ವಿಕೋಪಕ್ಕೆ ತಿರುಗಿದ್ದು ಮೂರ್ತಿ ಪ್ರತಿಷ್ಠಾಪನೆಯ ಕುರಿತು ನಡೆದ ಗಲಾಟೆಯಲ್ಲಿ ಉಪ ವಿಭಾಗಾಧಿಕಾರಿ,ಮತ್ತು ಡಿವೈ ಎಸ್ ಪಿ ಕಾರು ಜಖಂ ಗೊಂಡಿದೆ.
ಬಳಗಾನೂರ ಗ್ರಾಮದ ಬಸ್ ನಿಲ್ಧಾಣದ ಬಳಿ ಹಲವಾರು ವರ್ಷಗಳ ಹಿಂದೆ ರಾಣಿ ಚನ್ನಮ್ಮನ ನಾಮಫಲಕ ಹಾಕಲಾಗಿತ್ತು ,ನಂತರ ಈ ಫಲಕವನ್ನು ತೆರವು ಮಾಡಿ ಅದೇ ಜಾಗದಲ್ಲಿ ರಾತ್ರೋ ರಾತ್ರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು,ಈಗ ರಾಯಣ್ಣನ ಮೂರ್ತಿಯನ್ನೂ ತೆರವು ಮಾಡಿರುವದರಿಂದ,ರಾಯಣ್ಣ ಮತ್ತು ಚನ್ನಮ್ಮ ನ ಅಭಿಮಾನಿಗಳ ನಡುವೆ ದೊಡ್ಡ ಗಲಾಟೆಯೇ ಶುರುವಾಗಿದೆ.
ರಾಯಣ್ಣ,ಮತ್ತು ವೀರರಾಣಿ ಚನ್ನಮ್ಮಾಜಿಯನ್ನು ಜಾತಿಗೆ ಸೀಮೀತಗೊಳಿಸಿ,ಬಳಗಾನೂರ ಗ್ರಾಮದಲ್ಲಿ ಡರ್ಟಿ ಪಾಲಿಟಿಕ್ಸ್ ನಡೆಯುತ್ತಿದೆ. ಈ ರೀತಿಯ ಗಲಾಟೆಗೆ ಬ್ರೇಕ್ ಹಾಕಿ,ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ,ಮಂತ್ರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ.
ಜಂಟಲ್ ಮ್ಯಾನ್ ಹೋಮ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ಮದ್ಯಸ್ಥಿಕೆ ವಹಿಸಿ,ಮೂರ್ತಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆ ಹರಿಸುವದು ಅತ್ಯಗತ್ಯವಾಗಿದೆ.