ಬೆಳಗಾವಿ-ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಕಳೆದ ಒಂದು ವಾರದಿಂದ ಬ್ಯಾಂಕ್ ಚುನಾವಣೆ ಅವಿರೋಧ ಆಯ್ಕೆ ಮಾಡಲು ಕಸರತ್ತು ನಡೆಸಿದ್ದೇವು. ವೈಮನಸ್ಸು ತಪ್ಪಿಸಲು ಅವಿರೋಧ ಆಯ್ಕೆ ಒತ್ತು ಕೊಟ್ಟಿದ್ದೇವು. ಪಕ್ಷದ ಮುಖಂಡರು ಇದೇ ಸೂಚನೆಯನ್ನು ನೀಡಿದ್ದರು. ಜಾರಕಿಹೊಳಿ, ಸವದಿ ಹಾಗೂ ಕತ್ತಿ ಕುಟುಂಬ ಒಟ್ಟಿಗೆ ಬರಬೇಕು ನಿರ್ಧಾರ
ಜಿಲ್ಲೆಯ ಹೊಸ ರಾಜಕೀಯ ಪರ್ವ ಆರಂಭಿಸಲು ತೀರ್ಮಾನ ಮಾಡಿದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯ ಎಂದು ಲಕ್ಷ್ಮಣ ಸವದಿ ಹೇಳಿದರು.
16 ನಿರ್ದೇಶಕ ಸ್ಥಾನಗಳ ಪೈಕಿ 13 ಅವಿರೋಧ ಆಯ್ಕೆ.
ಮೂರು ಕ್ಷೇತ್ರದಲ್ಲಿ ಹೆಸರಿಗೆ ಮಾತ್ರ ಚುನಾವಣೆ ಆಗಲಿದೆ. ರಾಮದುರ್ಗ, ಖಾನಾಪುರ ಹಾಗೂ ಕುರಿ ಉಣ್ಣಿ ಸಹಕಾರ ಸಂಘದ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಗ್ಗೆ ಒಟ್ಟಿಗೆ ಸೇರಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಕಾಂಗ್ರೆಸ್, ಬಿಜೆಪಿ ಎನ್ನುವ ಪ್ರಶ್ನೆಯೆ ಇಲ್ಲ. ಪಕ್ಷಾತೀತವಾಗಿ ಸಹಕಾರಿ ಕ್ಷೇತ್ರದ ಚುನಾವಣೆ ನಡೆದಿದೆ ಎಂದರು.
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ.
ಮಹಾರಾಷ್ಟ್ರ ಸಚಿವರಿಂದ ಕಪ್ಪು ಬಟ್ಟಿ ಧರಿಸಲು ನಿರ್ಧಾರ ಹಿನ್ನೆಲೆ. ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಯಾರೇ ಕೂಗಾಡಲಿ, ಹಾರಾಡಲಿ ಬೆಳಗಾವಿ ನಮ್ಮದೇ.
ಸೂರ್ಯ, ಚಂದ್ರ ಇರೋ ವರೆಗೆ ಬೆಳಗಾವಿ ನಮ್ಮದೇ.
ಮಹಾರಾಷ್ಟ್ರ ನಾಯಕರು ಏನೆ ಹೇಳಿದ್ರು ಅದೇಲ್ಲ ನಡೆಯಲ್ಲ. ತೀಟೆ ತೀರಿಸಿಕೊಳ್ಳಲು ಕೆಲವರು ನಾಯಕರು ಮಾತನಾಡುತ್ತಾರೆ. ಕಾನೂನು ಚೌಕಟ್ಟು ಮೀರಿದರೇ ಕ್ರಮ. ಬೆಳಗಾವಿ ಬಂದು ಹೇಳಿದ್ರೆ ತಕ್ಕ ಉತ್ತರ ನೀಡುತ್ತೇವೆ ಸವದಿ ಸವಾಲು ಹಾಕಿದ್ರು.
ಮಹಾರಾಷ್ಟ್ರ ಯಾವುದೇ ಸರ್ಕಾರ ಇದ್ದಾಗ ಈ ರೀತಿ ಖ್ಯಾತೆ ತಗೀತಾರೆ ಆನೆ ಹೋಗುವಾಗ ನಾಯಿ ಬೋಗಳಿದ್ರೆ ಏನು ಆಗೊಲ್ಲ ಎಂದರು
ಅವಿರೋಧ ಆಯ್ಕೆ ಮೂರಾಬಟ್ಟಿ,ಮೂರು ಕ್ಷೇತ್ರಗಳಲ್ಲಿ ಇಲೆಕ್ಷನ್ ಖಚಿತ
ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಎಲ್ಲ ಹದಿನಾರು ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡುವ ಪ್ರಕ್ರಿಯೆ ಮೂರಾಬಟ್ಟಿಯಾಗಿದ್ದು ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯುವದು ಖಚಿತವಾಗಿದೆ.ಖಾ ನಾಪೂರ,ರಾಮದುರ್ಗ ತಾಲ್ಲೂಕು ಹಾಗು ಉಣ್ಣೆ ಮಂಡಳಿಯ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ
ಮ ತ್ತೊಂದು ಅವಧಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಮೆಟ್ಟಿಲೇರಿದ ಡಿಸಿಎಂ ಸವದಿ ಆಪ್ತ
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಮತ್ತೊಂದು ಅವಧಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಕಿತ್ತೂರು ಶಾಸಕರೂ ಆಗಿರುವ ಮಹಾಂತೇಶ ದೊಡ್ಡಗೌಡರ ಅವಿರೋಧ ಆಯ್ಕೆ ಆಗಿದ್ದಾರೆ. ಬೈಲಹೊಂಗಲ ತಾಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಮಹಾಂತೇಶ ದೊಡ್ಡನಗೌಡರ ಆಯ್ಕೆ ಆಗಿದ್ದಾರೆ. ಬೈಲಹೊಂಗಲನಿಂದ ನಾಮಪತ್ರ ಸಲ್ಲಿಸಿದ್ದ ಬಸನಗೌಡ ಪಾಟೀಲ ನಾಮಪತ್ರ ಹಿಂಪಡೆದರು. ಬಸವನಗೌಡರನ್ನು ಮನವೊಲಿಸುವಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ ಯಶಸ್ವಿ ಆಗಿದ್ದಾರೆ. ಕಮಲ ನಾಯಕರ ಸಲಹೆ ಮೇರೆಗೆ ಬಸವನಗೌಎ ನಾಮಪತ್ರ ಹಿಂಪಡೆದರು. ಜಿಲ್ಲೆಯ ಕಮಲ ನಾಯಕರಿಗೆ
ಮೂರು ಕ್ಷೇತ್ರಗಳು ಕಗ್ಗಂಟಾಗಿ ಉಳಿದಿವೆ. ರಾಮದುರ್ಗ, ಖಾನಾಪುರ ಹಾಗೂ ಉಣ್ಣೆ ಉತ್ಪಾದಕರ ಸಹಕಾರಿ ಮಂಡಳಿ ಸ್ಥಾನಗಳು ಅವಿರೋಧ ಆಯ್ಕೆ ಅಸಾಧ್ಯವಾಗಿದೆ. ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಖಚಿತವಾಗಿದೆ.