ಬೆಳಗಾವಿ- ಪಾಪ ಈ ರೈತರು ಏನೂ ತಪ್ಪು ಮಾಡಿಲ್ಲ,ಇವರ ಹೆಸರು ಹಳ್ಳದ ಇರುವದೇ ದೊಡ್ಡ ತಪ್ಪಾಗಿದೆ, ಹಳ್ಳದ ಎನ್ನುವ ಹೆಸರು ಇರುವ ಉತಾರಗಳಲ್ಲಿ,ಹಳ್ಳ ಸೇರಿ ,300 ಎಕರೆಗೂ ಹೆಚ್ಚು ಜಮೀನು,ಸರ್ಕಾರಿ ಜಮೀನು ಎಂದು ಪರಿವರ್ತನೆಯಾಗಿದೆ.
ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ,ಹಳ್ಳದ ಎಂಬ ಹೆಸರಿನಲ್ಲಿರುವ 300 ಎಕರೆಗೂ ಹೆಚ್ಚು ಜಮೀನು ಈಗ ಸರ್ಕಾರಿ ಜಮೀನು ಎಂದು ದಾಖಲಾಗಿದ್ದು ಹಳ್ಳದ ಕುಟುಂಬಗಳ ರೈತರು ನ್ಯಾಯ ದೊರಕಿಸಿಕೊಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಈ ಅವಘಡ ನಡೆದಿದ್ದು ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ,ಬೆಳೆ ಪರಿಹಾರದ ಸಮೀಕ್ಷೆ ನಡೆಸುವಾಗ ,ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ ತಂತ್ರಾಂಶ,ಹಳ್ಳದ ಎಂಬ ಹೆಸರನ್ನು ಹಳ್ಳ ಎಂದು ಪರಿಗಣಿಸಿ ಈ ಎಲ್ಲ ಜಮೀನುಗಳಲ್ಲಿ ಹಳ್ಳ ಇದೆ ಎಂದು ಎಲ್ಲ ಜಮೀನುಗಳು ಈಗ ಸರ್ಕಾರಿ ಪಾಲಾಗಿವೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					