ಬೆಳಗಾವಿ – ಕುದುರೆ ಸವಾರ,ಪಂಚಮಸಾಲಿ ಸಮಾಜದ ಸರ್ದಾರ.ಸಮಾಜದ ಜಗದ್ಗುರುಗಳ ಪ್ರೀತಿಯ ಲೀಡರ್ ವಿನಯ್ ಕುಲಕರ್ಣಿ ಅವರ ಹುಟ್ಟು ಹಬ್ಬದ ದಿನವೇ ಸಿಬಿಐ ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಹಿಂಡಲಗಾ ಜೈಲಿಗೆ ಧಾವಿಸಿ ಮೂರು ದಿನಗಳವರೆಗೆ ಕಸ್ಟಡಿಗೆ ಪಡೆದುಕೊಂಡರು.ಜನ್ಮ ದಿನದ ದಿನವೇ ವಿನಯ್ ಕಸ್ಟಡಿಗೆ ಹೋಗಬೇಕಾಯಿತು.
ಧಾರವಾಡ ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದ ಆರೋಪದಡಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ನ್ಯಾಯಾಲಯ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಿದೆ.
ಹೀಗಾಗಿ ಬೆಳಂಬೆಳಗ್ಗೆ ಹಿಂಡಲಗಾ ಜೈಲಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳು ಬೆಳಗ್ಗೆ 7.30ಕ್ಕೆ ಜೈಲಿನಿಂದ ಕರೆದೊಯ್ದರು. ನಿನ್ನೆ ರಾತ್ರಿಯೇ ನಗರಕ್ಕೆ ಆಗಮಿಸಿದ್ದ ಅಧಿಕಾರಿಗಳು ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದರು. ಬೆಳಗ್ಗೆ 6.30ಕ್ಕೆ ಜೈಲಿಗೆ ಆಗಮಿಸಿದ ಅಧಿಕಾರಿಗಳು ಕೋರ್ಟ್ ಆದೇಶ ಪ್ರತಿಯನ್ನು ಜೈಲಾಧಿಕಾರಿಗಳಿಗೆ ನೀಡಿದರು. ಬಳಿಕ ಜೈಲಿನ ಸಿಬ್ಬಂದಿ ವಿನಯ್ ಕುಲಕರ್ಣಿ ಅವರನ್ನು ಹುಬ್ಬಳ್ಳಿಯ ಸಿಬಿಐ ಕಚೇರಿಗೆ ಕರೆದೊಯ್ದರು.
ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಯೋಗೇಶಗೌಡ ಕೊಲೆ ಪ್ರಕರಣದಡಿ ಮೂರು ದಿನಗಳ ಕಾಲ ಡ್ರಿಲ್ ಮಾಡಲಿದ್ದಾರೆ.