Breaking News
Home / Breaking News / ಕೊನೆಗೂ, ಬಿಜೆಪಿಯಲ್ಲಿ ಸೆಟಲ್ಲ್ ಆದ್ರು ರಮೇಶ್ ಸಾಹುಕಾರ್….!

ಕೊನೆಗೂ, ಬಿಜೆಪಿಯಲ್ಲಿ ಸೆಟಲ್ಲ್ ಆದ್ರು ರಮೇಶ್ ಸಾಹುಕಾರ್….!

ಬೆಳಗಾವಿ- ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗ,ಬಹಳಷ್ಟು ಕಾಂಗ್ರೆಸ್ ನಾಯಕರು ಈ ಕುರಿತು ಹಲವಾರು ರೀತಿಯ ಟೀಕೆ ಟಿಪ್ಪಣಿ ಮಾಡಿದ್ದರು.

ರಮೇಶ್ ಜಾರಕಿಹೊಳಿ ಅವರ ಸಿದ್ಧಾಂತವೇ ಬೇರೆ ಅವರು ಬಿಜೆಪಿಯಲ್ಲಿ ಎರಡು ವಾರ ಉಳಿಯೋದಿಲ್ಲ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎಂದು ವಾಖ್ಯಾನ ಮಾಡಿದ್ದರು.

ಆದ್ರೆ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿ,ಕೋವೀಡ್ ಆತಂಕದ ಅವಧಿಯಲ್ಲಿ ಓಡಾಡಿದ್ದನ್ನು ಗಮನಿಸಿದ ಬಿಜೆಪಿ ವರಿಷ್ಠರಿಗೆ,ರಮೇಶ್ ಜಾರಕಿಹೊಳಿ ಅವರ ಸಾಮರ್ಥ್ಯ ಮತ್ತು ಸಾಮಾಜಿಕ ಕಳಕಳಿ ಅರ್ಥವಾಗಿದೆ.

ರಮೇಶ್ ಜಾರಕಿಹೊಳಿ ಕಾರ್ಯವೈಖರಿಯ ಬಗ್ಗೆ ಆರ್ ಎಸ್ ಎಸ್ ಪ್ರಮುಖರೂ ಮೆಚ್ಚುಗೆ ವ್ಯೆಕ್ತ ಪಡಿಸಿದ್ದಾರೆ,ರಮೇಶ್ ಜಾರಕಿಹೊಳಿ ಅಲ್ಪಾವಧಿಯಲ್ಲೇ ಬಿಜೆಪಿ ನಾಯಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ಯಾವುದೇ ಪಕ್ಷದಲ್ಲಿದ್ದರೂ ಆ ಪಕ್ಷದ ಬಗ್ಗೆ ನಿಷ್ಠೆ ತೋರಿಸುತ್ತಾರೆ. ರಮೇಶ್ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆ ಆದ ಬಳಿಕ ತಪ್ಪದೇ ಪಕ್ಷದ ,ಮತ್ತು ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ, ಬೆಜಿಪಿಯ ಸಿದ್ಧಾಂತ ಮತ್ತು ಸಂಪ್ರದಾಯಗಳ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದು ,ರಮೇಶ್ ಜಾರಕಿಹೊಳಿ ಅವರು ಮಾನಸಿಕಾಗಿ ಬಿಜೆಪಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸೆಟಲ್ಲ್ ಆಗಿದ್ದಾರೆ.

ಬಿಜೆಪಿ ಕಚೇರಿ ನಿರ್ಮಾಣಕ್ಕೆ ಒಂದು ಕೋಟಿ ರೂ ಕೊಡುವ ಭರವಸೆ ನೀಡಿದ ಸಾಹುಕಾರ್

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಮಾಜಿ ಶಾಸಕ ಸಂಜಯ ಪಾಟೀಲ ಅವರು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ಕಟ್ಟಡ ಕಟ್ಟುವ ವಿಚಾರವನ್ನು ಸಚಿವ ರಮೇಶ್ ಜಾರಕಿಹೊಳಿ ಅವರ ಎದುರು ಮಂಡಿಸಿದಾಗ,ವಿಚಾರ ಮಾಡದೇ ತಕ್ಷಣ ಕೆಲಸ ಶುರು ಮಾಡಿ,ನಾನು ವ್ಯೆಯಕ್ತಿಕವಾಗಿ ಒಂದು ಕೋಟಿ ರೂ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸಂಜಯ ಪಾಟೀಲರಿಗೆ ಭರವಸೆ ನೀಡಿದ್ದಾರೆ.ಎಂದು ಆ ಸಂಧರ್ಭದಲ್ಲಿದ್ದ ಬಿಜೆಪಿ ನಾಯಕರೇ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ

ಇಂದು ಗೋಕಾಕಿನಲ್ಲಿ ಬಿಜೆಪಿ ಪಕ್ಷದ ಮಹತ್ವದ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರು ಪಾಲ್ಗೊಂಡು ಭಾರತ ಮಾತೆಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು

ಗೋಕಾಕ್ ಕಾರ್ಯಕ್ರಮದ ಬಳಿಕ ರಮೇಶ್ ಜಾರಕಿಹೊಳಿ ಮಾತನಾಡಿದ್ದು….

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಆಗೊದಿಲ್ಲ. ಮುಖ್ಯಮಂತ್ರಿಯಾಗಿ ಅವರೇ‌ ಮುಂದುವರೆಯಲಿದ್ದಾರೆ ಎಂದು
ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ‌ ಹೇಳಿದರು.

ಗೋಕಾಕದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿಯ ಗ್ರಾಮೀಣ ಮಂಡಲ ಪ್ರಶಿಕ್ಷಣ ವರ್ಗದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಪ್ರಶ್ನೆಯೇ ಇಲ್ಲ. ಮಾಧ್ಯಮದವರೇ ಈ ಪ್ರಶ್ನೆಯನ್ನು ಪದೇ ಪದೆ ಕೇಳುತ್ತಿದ್ದೀರಿ. ಮುಖ್ಯಮಂತ್ರಿಯಾಗಿ ಅವರೇ ಇರ್ತಾರೆ. ಇನ್ನು ಶಾಲೆ ಆರಂಭಿಸುವ ಕುರಿತಂತೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ಬಗ್ಗೆ ಶಿಕ್ಷಣ ಸಚಿವರು,ಮುಖ್ಯಮಂತ್ರಿಗಳು ಹಾಗೂ ಪ್ರಮುಖರು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ‌ ನಿರ್ಧಾರವನ್ನ ಸರ್ಕಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *