Breaking News

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಚೀಟಿ ಕಡ್ಡಾಯವಾಗಿ ವಿತರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿ‌ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಏ.29) ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮತದಾನ ದಿನ ಸಮೀಪಿಸುತ್ತಿರುವುದರಿಂದ ಚುನಾವಣಾ ಸಿಬ್ಬಂದಿ ಕೂಡಲೇ ಮನೆ ಮನೆಗೆ ತೆರಳಿ ಮತದಾರರ ಚೀಟಿ ವಿತರಣೆ ಮಾಡಬೇಕು ಎಂದು ಹೇಳಿದರು.

ಮತದಾನ ಜಾಗೃತಿಗಾಗಿ ಅನೇಕ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರಕವಾಗಿ ಬಿಎಲ್.ಓ.ಗಳು ಮನೆ‌ಮನೆಗೆ ತೆರಳಿ ಮತದಾರರ ಚೀಟಿ ವಿತರಿಸುವುದರಿಂದ ಮತದಾನ‌ ಪ್ರಮಾಣ ಹೆಚ್ಚಿಸಲು ಸಾಧ್ಯವಾಗಲಿದೆ.

ಕಳೆದ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ತಪ್ಪದೇ ಮತದಾರರ ಚೀಟಿ ವಿತರಿಸಬೇಕು. ಇದರಿಂದ ಸಾರ್ವಜನಿಕರಿಗೆ ತಮ್ಮ ಮತಗಟ್ಟೆ‌ಯನ್ನು ತಲುಪಲು ಅನುಕೂಲವಾಗಲಿದೆ ಎಂದು ನಿತೇಶ್ ಪಾಟೀಲ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ವಿಶೇಷ ಜಿಲ್ಲಾಧಿಕಾರಿ ಗೀತಾ ಕೌಲಗಿ ಉಪಸ್ಥಿತರಿದ್ದರು.
ಸಹಾಯಕ ಚುನಾವಣಾಧಿಕಾರಿಗಳಾದ ಪಿ.ಎನ್.ಲೋಕೇಶ್, ರಾಜಶ್ರೀ ಜೈನಾಪುರ, ಡಾ.ರಾಜೀವ್ ಕೂಲೇರ್, ಬಲರಾಮ್ ಚವಾಣ, ಪ್ರಭಾವತಿ ಫಕ್ಕೀರಪುರ, ಸತೀಶ್ ಕುಮಾರ್, ಷಕೀಲ್ ಅಹ್ಮದ್ ಹಾಗೂ ತಹಶೀಲ್ದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
****

Check Also

ಬೆಳಗಾವಿಯಲ್ಲಿ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ

ಬೆಳಗಾವಿ- ಸಪ್ತರ್ಷಿಗಳ ದಾನ, ಅಷ್ಠ ಋಷಿ ಡಾ.ಪ್ರಭಾಕರ್ ಕೋರೆ ಅವರ ಶ್ರಮದಾನದಿಂದ ಹಳ್ಳಿಯಿಂದ ದೆಹಲಿಗೆ ,ದೆಹಲಿಯಿಂದ ದುಬಾಯಿ ವರೆಗೆ ಅಂತರಾಷ್ಟ್ರೀಯ …

Leave a Reply

Your email address will not be published. Required fields are marked *