ಯಮಕನಮರಡಿ ಕ್ಷೇತ್ರದಲ್ಲಿ ಶಾಸಕ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಕುರಿತು ವಿಶೇಷ ಗಮನಹರಿಸಿದ್ದು ಶಾಲೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ ಅನುದಾನ ನೀಡಿದ್ದಾರೆ
ಬೆಳಗಾವಿ : ಶಾಸಕರ ಅನುದಾನದಲ್ಲಿ ಬಿಡುಗಡೆ ಗೊಂಡ 1 ಕೋಟಿ 11 ಲಕ್ಷ ರೂಪಾಯಿ ವೆಚ್ಚದ ಶಾಲಾ ಅಭಿವೃದ್ಧಿ ಕಾಮಗಾರಿಗೆ ಜಿಪಂ.ಸದಸ್ಯ ಸಿದ್ದು ಸುಣಗಾರ ಮಂಗಳವಾರ ಚಾಲನೆ ನೀಡಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸೂನಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ 11 ಲಕ್ಷ, ಕೇಚ್ಚನಟ್ಟಿ ಶಾಲೆಗೆ 11 ಲಕ್ಷ, ಹಳ್ಳಿ ಹೂಸೂರ ಗ್ರಾಮದ ಶಾಲೆಗೆ 11 ಲಕ್ಷ, ಬಮ್ಮನಟ್ಟಿಗೆ 11 ಲಕ್ಷ, ಹೋಸವಂಟಮುರಿ ಗ್ರಾಮದ ಮೂರು ಶಾಲೆಗಳಿಗೆ 33 ಲಕ್ಷ, ಹೇಗ್ಗೇರಿ ಗ್ರಾಮದ ಶಾಲೆಗೆ 12 ಲಕ್ಷ, ಕಟ್ಟಿನಬಾವಿ ಗ್ರಾಮದ ಶಾಲೆಗೆ 11 ಲಕ್ಷ, ಶಿವಾಪೂರ ಗ್ರಾಮದ ಶಾಲೆಗೆ 11 ಲಕ್ಷ ವೆಚ್ಚದ ಶಾಲಾ ಕೊಠಡಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದಿರಲಿ ಎಂದು ಶ್ರಮಿಸುತ್ತಿದ್ದಾರೆ. ಪ್ರತಿ ಸರ್ಕಾರಿ ಶಾಲೆಗಳನ್ನು ಹೆಚ್ಚು ಅಭಿವೃದ್ಧಿ ಪಡೆಸಬೇಕು ಎನ್ನುವುದು ಅವರ ಉದ್ದೇಶವಾಗಿದೆ. ಆದ ಕಾರಣ ವಿವಿಧ ಶಾಲೆಯ ಅಭಿವೃದ್ಧಿ ಶಾಸಕರ ಅನುದಾನದಲ್ಲಿ 1 ಕೋಟಿ 11 ಲಕ್ಷ ಬಿಡುಗಡೆ ಮಾಡಿದ್ದಾರೆ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ರಾಮಣ್ಣಾ ಗುಳ್ಳಿ, ಯಲ್ಲಪ್ಪ ಕೋಳಿಕಾರ, ಗಂಗಪ್ಪ ವರಗ, ನರಸೀನಬಾನು ಅನ್ಸಾರಿ, ಭೀಮರಾವ್ ನಾಯಕ್, ಆಪ್ತ ಸಹಾಯಕರ ಸುರೇಶ್ ನಾಯಕ್, ಎಸ್ ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷ. ಉಪಾಧ್ಯಕ್ಷ, ಸದಸ್ಯರು, ಮುಖಂಡರು ಇದ್ದರು.