ಬೆಳಗಾವಿ- ಅವರ ಬದುಕೇ ಬರಹ..ಬರವಣಿಗೆ ಮೂಲಕ, ಗುಡುಗಿ ರಾಜಕೀಯ,ಹಾಗೂ ಭೂಗತ ಜಗತ್ತನ್ನು ನಡುಗಿಸಿದ್ದ ಪತ್ರಿಕೋದ್ಯಮದ ಹಿರಿಯಣ್ಣ ರವಿ ಬೆಳಗೆರೆ ಅವರು ಮದ್ಯರಾತ್ರಿ ಬರೆಯುತ್ತಲೇ ಬದುಕಿನ ಪಯಣ ಮುಗಿಸಿದ್ದಾರೆ.
ನಿನ್ನೆ ಮದ್ಯರಾತ್ರಿ ಹೃದಯಾಘಾತದಿಂದ ರವಿ ಬೆಳಗೆರೆ ಅವರು ನಿಧನರಾಗಿದ್ದಾರೆ.ಉಪನ್ಯಾಸಕರಾಗಿ ಬದುಕಿನ ಪಯಣ ಆರಂಭಿಸಿದ್ದ ಅವರು,ನಂತರ ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ಜನಪ್ರೀಯರಾಗಿದ್ದರು.ಅನೇಕ ಕಾದಂಬರಿಗಳನ್ನು ಬರೆದಿರುವ ಅವರು ಪುಲ್ವಾಮಾ ದಾಳಿಯ ಬಳಿಕ ಖುದ್ದಾಗಿ ಪುಲ್ವಾಮಾ ಗೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ತಿಳಿದುಕೊಂಡು ಪುಲ್ವಾಮಾ ದಾಳಿಯ ಬಗ್ಗೆಯೇ ಒಂದು ಪುಸ್ತಕವನ್ನು ಬರೆದಿದ್ದರು.
ರವಿ ಬೆಳಗೆರೆ ಅವರು ಬರೆದ ಭೀಮಾ ತೀರದ ಹಂತಕರು,ಫೇಮಸ್ ಆಗಿತ್ತು ,ನೂರಾರು ಜನ ಯುವಕರಿಗೆ ಪ್ರೋತ್ಸಾಹ ನೀಡಿ,ಪತ್ರಿಕೋದ್ಯಮದಲ್ಲಿ ಬೆಳೆಸಿದ್ದರು.ಅವರ ಗರಡಿಯಲ್ಲಿ ಬೆಳೆದ,ನೂರಾರು ಜನರು ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಪತ್ರಿಕೋದ್ಯಮದ ಹಿರಿಯಣ್ಣ ರವಿ ಬೆಳಗೆರೆ ಅವರ ನಿಧನದಿಂದ ಬರಹಲೋಕ ಬಡವಾಗಿದೆ.