ಬೆಳಗಾವಿ- ಬೆಳಗಾವಿಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಡಿಫ್ರಂಟ್ ಆಗಿ ಆಚರಣೆ ಮಾಡುತ್ತಾರೆ,ಮನೆಗಳ ಎದುರು ಹಾಕಿರುವ ರಂಗೋಲಿ ಚಿತ್ರಣ ದೀಪಾವಳಿ ಹಬ್ಬದ ರಂಗು ದುಪ್ಪಟ್ಟು ಮಾಡುತ್ತದೆ.
ಈ ಬಾರಿ ಕೋವೀಡ್ ಇದ್ದರೂ ಜನರ ಉತ್ಸಾಹ,ಸಡಗರ,ಸಂಬ್ರಮಕ್ಕೆ ಕೊರತೆ ಇರಲಿಲ್ಲ. ಸರ್ಕಾರ ಪಟಾಕಿ ಬ್ಯಾನ್ ಮಾಡಿದ್ರೂ ಮಕ್ಕಳು ಮನೆಗಳ ಮುಂದೆ ಸುರಸುರಿ ಸುರಿಸಿ,ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಬ್ರಮಿಸಿದರು.
ಅಂಗಡಿಗಳಿಗೆ ಮಾಡಿದ ದೀಪಾಲಂಕಾರ,ಮನೆಗಳ ಅಂಗಳದಲ್ಲಿ ಹಚ್ಚಿದ ಹಣತೆಗಳ ಬೆಳಕು,ದೀಪಾವಳಿ ಹಬ್ಬದ ಮೆರಗು ಹೆಚ್ಚಿಸಿದವು,ಮರಾಠಾ ಸಮಾಜದವರು ಮನೆಗಳ ಎದುರು ನಿರ್ಮುಸಿದ ಶಿವಾಜಿ ಮಹಾರಾಜರ ಕೋಟೆಯ ರೂಪಕಗಳು,ಈ ರೂಪಕಗಳಿಗೆ ಮಾಡಿದ ಅತ್ಯಾಕರ್ಷಕ ದೀಪಾಲಂಕಾರ ಎಲ್ಲರನ್ನು ಆಕರ್ಷಿಸಿತು.
ದೀಪಾವಳಿ ಹಬ್ಬದ ನಿಮಿತ್ಯ ಗವಳಿ ಸಮಾಜದವರು ಆಚರಿಸುವ ಎಮ್ಮೆಗಳ ಓಟ,ಎಲ್ಲರನ್ನು ರಂಜಿಸಿತು,ಬೆಳಗಾವಿಯ ಗವಳಿ ಗಲ್ಲಿಯಲ್ಲಿ ನಡೆದ ಎಮ್ಮೆಗಳ ಓಟ ನೋಡಲು ತಂಡೋಪ ತಂಡವಾಗಿ ಬಂದಿದ್ದರು.
ದೀಪಾವಳಿ ಹಬ್ಬದ ಅಂಗವಾಗಿ,ಗವಳಿ ಸಮಾಜದವರು,ಎಮ್ಮೆಗಳಿಗೆ ಶೃಂಗಾರ ಮಾಡಿ,ಗಲ್ಲಿಗಳಲ್ಲಿ ಓಡಿಸುವದು ಬೆಳಗಾವಿಯ ವಿಶಢಷ ಮತ್ತು ವಿಶಿಷ್ಠ ಸಂಪ್ರದಾಯವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ದೀಪಾವಳಿಯ ನಿಮಿತ್ಯ ಮೂಡಲಗಿಯಲ್ಲಿ ವಿಶೇಷ ಆಚರಣೆ ನಡೆಯುತ್ತದೆ. ಬೆಳಗಾವಿಯಲ್ಲಿ ಎಮ್ಮೆಗಳನ್ನು ಓಡಿಸಿ ಸಂಬ್ರಮ ಪಟ್ಟರೆ,ಮೂಡಲಗಿಯಲ್ಲಿ ಕುರಿಗಳನ್ನು ಬೆದರಿಸಿ ಓಡಿಸಿ ಖುಷಿ ಪಡ್ತಾರೆ,ಮೂಡಲಗಿಯ ಹಾಲುಮತ ಸಮಾಜ….