ಬೆಳಗಾವಿ- ಆಗಾಗ ಬೆಂಕಿಯಲ್ಲಿ ತುಪ್ಪ ಸುರಿಯೋದು ,ಕಾಲು ಕೆದರಿ,ಕ್ಯಾತೆ ತೆಗೆಯೋದು,ಮಹಾರಾಷ್ಟ್ರ ನಾಯಕರ ಚಾಳಿ,ಯಾಗಿದೆ ಮಹಾರಾಷ್ಟ್ರದ ಡಿಸಿಎಂ ಅಜೀತ ಪವಾರ್ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ.
ನಿನ್ನೆ ಮುಂಬಯಿಯಲ್ಲಿ ನಡೆದ ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ ಠಾಖ್ರೆ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಾರಾಷ್ಟ್ರ ಡಿಸಿಎಂ,ಎನ್ ಸಿ ಪಿ ಮುಖಂಡ,ಅಜೀತ ಪವಾರ,ಬೆಳಗಾವಿ,ನಿಪ್ಪಾಣಿ ಬೀದರ ,ಬಾಲ್ಕೀ,ಮಹಾರಾಷ್ಟ್ರಕ್ಕೆ ಸೇರಿಸುವದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು ,ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು ನನಸು ಮಾಡುತ್ತದೆ. ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆಣಕಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಮರಾಠಿ ಭಾಷಿಕರ ಪರವಾಗಿದೆ,ಬಾಳಾಸಾಹೇಬ್ ಠಾಖ್ರೆ ಅವರ ಕನಸಿನಂತೆ ಮಹಾರಾಷ್ಟ್ರ ಸರ್ಕಾರ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡಲಿದೆ ಎಂದು ಅಜೀತ ಪವಾರ್ ಹೇಳುವ ಮೂಲಕ ಮತ್ತೆ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿದ್ದಾರೆ.
ಗಡಿ ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದರು ಸಹ ಮಹಾರಾಷ್ಟ್ರ ಸರ್ಕಾರ ಪದೇ,ಪದೇ ಗಡಿ ಕ್ಯಾತೆ ತೆಗೆದು ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ.