ಬೆಳಗಾವಿ-ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸಚಿವ ಸಂಪುಟದ ಪುನಾರಚನೆ,ಅನುಮತಿ ಕೊಡುತ್ತದೆಯೋ,ಅಥವಾ ವಿಸ್ತರಣೆಗೆ ಅನುಮತಿ ಕೊಡುತ್ತದೆಯೋ ಗೊತ್ತಿಲ್ಲ.ಯಾವುದಕ್ಕೂ ಅನುಮತಿ ನೀಡಿದ್ರೂ ಸಹ ಈ ಬಾರಿ ಉಮೇಶ್ ಕತ್ತಿ ಮಂತ್ರಿ ಆಗೋದು ಪಕ್ಕಾ ಆಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿತರಾಗಿರುವ ಕತ್ತಿ ಸಹೋದರರ ಪಾಲಿಗೆ ಈಗ ಗುಡ್ ಲಕ್ ಶುರುವಾಗಿದೆ.ರಮೇಶ್ ಕತ್ತಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ ಆಯ್ಕೆಯಾಗಿದ್ದು,ಉಮೇಶ್ ಕತ್ತಿ ಈಗ ಬೆಂಗಳೂರಿಗೆ ದೌಡಾಯಿಸಿದ್ದಾರೆ.ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಲ್ಲ ರೀತಿಯ ಕಸರತ್ತು ಗಳನ್ನು ಮಾಡಿದ್ದು.ಅವರು ಈ ಬಾರಿ ಮಂತ್ರಿ ಆಗೋದು ಖಾತ್ರಿ,ಅಂತಾರೆ ಅವರ ಬೆಂಬಲಿಗರು
ಸಚಿವ ಸಂಪುಟ ಪುನಾರಚಣೆ ಆದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಮಂತ್ರಿಗಳನ್ನು ಕೈಬಿಡುತ್ತಾರೆ ಎನ್ನುವ ಸುದ್ಧಿ ಈಗ ಬೆಳಗಾವಿ ಜಿಲ್ಲೆಯಾದ್ಯಂತ ಸುಳಿದಾಡುತ್ತಿದೆ.ಆದ್ರೆ ಯಾರನ್ನು ಕೈಬಿಡುತ್ತಾರೆ ಅನ್ನೋದು ನಿಗೂಢವಾಗಿದೆ.
ಇಬ್ಬರನ್ನು ಕೈಬಿಟ್ಟು ಒಬ್ಬರಿಗೆ ಹೊಸದಾಗಿ ಮಂತ್ರಿ ಮಾಡೋದು ಸಿಎಂ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದ್ದು ಸರ್ಕಾರ ರಚನೆ ಆದಾಗಿನಿಂದ ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿರುವ ಉಮೇಶ್ ಕತ್ತಿ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಗುವ ಎಲ್ಲ ಸಾಧ್ಯತೆಗಳಿವೆ.