ಗೋಕಾಕ್ : ಇಲ್ಲಿನ ಹಿಲ್ ಗಾರ್ಡ್ ನ ಗೃಹ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ಅದ್ದೂರಿಯಿಂದ ಗುರುವಾರ ಆಚರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ರವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದೇ ವೇಳೆ ಮಾಜಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿವೇಕ ಜತ್ತಿ ಮಾತನಾಡಿ, ಉಕ್ಕಿನ ಮಹಿಳೆ ಎಂದು ಕರೆಯುವ ಇಂದಿರಾ ಗಾಂಧಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಭಾರತ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಬಸವರಾಜ ಜತ್ತಿ, ಅರವಿಂದ ಕಾರ್ಚಿ, ಮಾರುತಿ ಗುಟಗುದ್ದಿ, ಪಾಡುರಂಗ ರಂಗಸುಭೆ, ಮುನ್ನಾ ಖತಿಬ್, ನಾಡಿಗೇರ, ಸುರೇಶ ಇತರರು ಇದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ