ಬೆಳಗಾವಿ-ಎಲ್ಲರೂ ಡಿಜಿಟಲ್ ಇಂಡಿಯಾ ಮಂತ್ರ ಜಪಿಸುತ್ತಿದ್ದಾರೆ,ಪೇಪರ್ ಲೆಸ್ ವ್ಯೆವಹಾರ ಮಾಡುತ್ತಿದ್ದಾರೆ,ನಾವ್ಯಾಕೆ ಸುತ್ತಿಗೆ ರಾಡ್ ಬಳಿಸಿ ಕಳ್ಳತನ ಮಾಡಬೇಕು,ನಾವೂ ಡಿಜಿಟಲ್ ಆಗಿದ್ದೇವೆ,ನಾವೂ ಹೈಟೆಕ್ ಆಗಿದ್ದೇವೆ ಅಂತಾ ಕಳ್ಳರು ಸಾಬೀತು ಮಾಡಿದ್ದಾರೆ ,ಅಧುನಿಕ ತಂತ್ರಜ್ಞಾನ ಬಳಿಸಿ,ಬೆಳಗಾವಿಯಲ್ಲಿ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರುಗಳನ್ನು ದೋಚಿದ್ದಾರೆ.
ದಸರಾ ಹಬ್ಬದ ಸಂಧರ್ಭದಲ್ಲಿ ಖರೀಧಿ ಮಾಡಿ,ಪೂಜೆ ಮಾಡಿ ಒಂದೆರಡು ರೌಂಡ್ ಹಾಕಿ ಮನೆ ಮುಂದೆ ನಿಲ್ಲಿಸಿದ ಎರಡು ಹೊಸ ಇನ್ನೋವಾ ಕಾರುಗಳನ್ನು ಕಳುವು ಮಾಡಿದ ಘಟನೆ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ನಡೆದಿದೆ.
ಸದಾಶಿವ ನಗರದ ಡಾ. ಬೆಲ್ಲದ,ರಾಮತೀರ್ಥ ನಗರದ ಅನೀಲ ಪಾಟೀಲ ಎಂಬುವವರಿಗೆ ಸೇರಿದ ಎರಡು ಇನ್ನೋವಾ ಕಾರುಗಳು ಕಳುವಾದ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೋವಾ ಕಾರಿನ ಲಾಕ್ ಮುರಿಯಲು ಈ ಕಳ್ಳರು ಸುತ್ತಿಗೆ,ರಾಡ್ ಬಳಿಸಿಲ್ಲ ಸಾಫ್ಟವೇರ್ ಮೂಲಕ ಕಾರಿನ ಲಾಕ್ ತೆರವು ಮಾಡಿರುವ ದೃಶ್ಯ ಸಿಸಿ ಟಿವ್ಹಿ ಕ್ಯಾಮರಾದಲ್ಲೆ ಸೆರೆಯಾಗಿದ್ದು,ಮಾಳ ಮಾರುತಿ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಹೈಟೆಕ್ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ