ಬೆಳಗಾವಿ-ಬೆಳಗಾವಿಯ ಚೆನ್ನಮ್ಮನ ಸರ್ಕಲ್ ನಲ್ಲಿ ನಡೆಯಬಾರದ ಘಟನೆ ನಡೆಯಿತು ,ಕನ್ನಡ ಸಂಘಟನೆಯ ಕಾರ್ಯಕರ್ತರು ಬಸನಗೌಡ ಯತ್ನಾಳರ ಪ್ರತಿಕೃತಿಗೆ ಸೀರೆ ಉಡಿಸಿ,ಚಟ್ಟ ಕಟ್ಟಿ ಬಾಯಿ ಬಡಿದುಕೊಂಡು ಅಯ್ಯಯ್ಯೋ ಅನ್ಯಾಯ ಎಂದು ಅವಾಜ್ ಹಾಕಿದ್ರು ಜನ ಸೇರಿದ್ರು,ಕನ್ನಡದ ಕಾರ್ಯಕರ್ತರು ಲಬೋ..ಲಬೋ ಅಂತಾ ಹೊಯ್ಕೊಂಡ್ರು
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ,ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರತಿಕೃತಿ ತಯಾರು ಮಾಡಿ,ಅದಕ್ಕೆ ಸೀರೆ ಉಡಿಸಿ,ಶವಯಾತ್ರೆ ಹೊರಡಿಸುವ ತಯಾರಿ ನಡೆಸಿದ್ದರು,ಕಾರ್ಯಕರ್ತರ ಅವಾಜ್ ಹೆಚ್ಚಾಗುತ್ತಿದ್ದಂತೆಯೇ ಪೋಲೀಸರು ಅಲ್ಲಿಗೆ ಧಾವಿಸಿದರು,ಪ್ರತಿಕೃತಿಗೆ ಧರಿಸಿದ ಸೀರೆ ಎಳೆದು ಪ್ರತಿಕೃತಿಯನ್ನು ಹೊತ್ಕೊಂಡು ಹೋದ್ರು ಕ್ಷಣಾರ್ಧದಲ್ಲಿ ಸೀರೆ ಧರಿಸಿದ ಪ್ರತಿಕೃತಿಯನ್ನು ಪೋಲೀಸರು ನಾಪತ್ತೆ ಮಾಡಿದ್ರು
ಈ ಸಂಧರ್ಭದಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ್ತಿ,ಕಸ್ತೂರಿ ಭಾವಿ,ಕರ್ನಾಟಕ ಸರ್ಕಾರ ಮರಾಠಿಗರನ್ನು ಓಲೈಸಲು ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ,ಅದಕ್ಕೆ ವಿರೋಧ ಮಾಡಿದ ಕನ್ನಡಪರ ಸಂಘಟನೆಗಳ ಕುರಿತು ಬಸನಗೌಡ ಪಾಟೀಲ ಯತ್ನಾಳ ಹಗುರವಾಗಿ ಮಾತನಾಡಿದ್ದು ,ರಾಷ್ಡ್ರಪತಿಗಳು ಕೂಡಲೇ ಕರ್ನಾಟಕ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪೋಲೀಸರು ಯತ್ನಾಳರ ಪ್ರತಿಕೃತಿಯನ್ನು ಹೊತ್ಕೊಂಡು ಹೋದ ಪ್ರಸಂಗ,ಅಲ್ಲಿದ್ದವರನ್ನು ಕೆಲ ಕಾಲ ರಂಜಿಸಿತು,ಚನ್ನಮ್ಮನ ಸರ್ಕಲ್ ನಲ್ಲಿ ಸೀರೆ ಎಳದವರ‌್ಯಾರು…? ಎನ್ನುವ ಪ್ರಶ್ನೆ ಎದುರಾಯಿತು.