ಕುಮಾರಸ್ವಾಮಿ ಡಿಂಗ್ ಡಾಂಗ್ ಬೆಳಗಾವಿಯಲ್ಲಿ ಟಗರು ಟಾಂಗ್…!!!

ಗುಡ್ ವಿಲ್ ಇದ್ರೇ ತಾನೇ ಹಾಳಾಗೋಕೆ,ಕುಮಾರಸ್ವಾಮಿಗೆ ಟಗರು ಟಾಂಗ್

ಬೆಳಗಾವಿ- ಕಾಂಗ್ರೆಸ್ ನಿಂದ ಸರ್ವನಾಶ ಆದೆ ಎಂಬ ಎಚ್ ಡಿ ಕೆ ಹೇಳಿಕೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಲೇವಡಿ ಮಾಡಿದ್ದಾರೆ.ಗುಡ್ ವಿಲ್ ಇದ್ರೆ ತಾನೇ ಹಾಳಾಗೋಕೆ ಎಂದು ಸಿದ್ರಾಮಯ್ಯ ವ್ಯೆಂಗ್ಯವಾಡಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಸಹವಾಸದಿಂದ 12 ವರ್ಷದ ಹೆಸರು ಹಾಳಾಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ರಾಮಯ್ಯ, ಗುಡ್ ವಿಲ್ ಇದ್ರೇತಾನೇ ಹಾಳಾಗೋಕೆ, ಗುಡ್ ವಿಲ್ ಇದ್ರೇ ಹಾಳಾಗುತ್ತೆ. ಇಲ್ಲ ಎಲ್ಲಿಂದ ಹಾಳಾಗಬೇಕು ಎಂದು ವ್ಯಂಗ್ಯ ವಾಡಿದ್ದಾರೆ.

ಕುಮಾರ್ ಸ್ವಾಮಿ ಸುಳ್ಳು ಹೇಳೊದ್ರಲ್ಲಿ ನಿಸ್ಸಿಮ್ಮರು.
ಅವರ ಮಾತಿನಲ್ಲಿ ಸತ್ಯ ಇಲ್ಲ, ‌ಇವರನ್ನು ಸಿಎಂ ಮಾಡಿದ್ದೇ ತಪ್ಪಾಆಯ್ತಾ? ಇವರಿಗೆ ಸೀಟು ಕಮ್ಮಿ ಇದ್ರೂ ಇವರನ್ನೇ ಸಿಎಂ ಮಾಡಿದ್ದೇವೆ.. ಕಾಂಗ್ರೆಸ್ ಸೀಟು ಹೆಚ್ಚಿಗೆ ಇದ್ರೂ ಇವರನ್ನ ಸಿಎಂ ಮಾಡಿದ್ದೇವೆ.
ಅವರಿಗೆ ಉಪಯೋಗ ಆಗಿದೆ ,ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ತಪ್ಪಾಯ್ತಾ..? ಎಂದು ಸಿದ್ರಾಮಯ್ಯ ಪ್ರಶ್ನಿಸಿದ್ದಾರೆ.

ಕುಮಾರ್ ಸ್ವಾಮಿ ಕಣ್ಣೀರು ಹಾಕೋದು ಅವರ ಸಂಸ್ಕೃತಿ. ಕಣ್ಣೀರು ಹಾಕೋದು ದೇವೇಗೌಡರ ಸಂಸ್ಕೃತಿ.ಇವರು ಒಳ್ಳೆಯದಕ್ಕೂ ಹಾಕ್ತಾರೆ ಕೆಟ್ಟದಕ್ಕೂ ಹಾಕ್ತಾರೆ. ಓಲೈಕೆಗೂ ಕಾಗ್ತಾರೆ.
ಆ ಕಣ್ಣೀರಿಗೆ ಬೆಲೆ ಇಲ್ಲಾ ಎಂದು ಸಿದ್ರಾಮಯ್ಯ ತಿರಗೇಟು ನೀಡಿದರು.

ಕುಮಾರ್ ಸ್ವಾಮಿ ಆಗಿದ್ದಾಗ ಆಡಳಿತ ನಡೆಸಿದ್ದು ಎಲ್ಲಿಂದ ಗೊತ್ತಾ.? ವೆಸ್ಟೆಂಡ್ ಹೋಟೆಲ್ ನಿಂದ ಆಡಳಿತ ನಡೆಸಿದ್ದು,‌ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡಿದ್ದೇವೆ ಅಂತಾ ಹೇಳಿದ್ದಾರಲ್ಲ,ಅವರ ಮನೆಯಿಂದ ಕೊಟ್ಟಿದ್ದಾರಾ? ಸಿಎಂ ಮಾಡಿದ್ರಿಂದ ಕೊಟ್ಟಿದ್ದಾರೆ ಅಷ್ಟೇ.
ಅದೇನು ದೊಡ್ಡಸ್ತಿಗ ಹೇಳ್ತಾರೆ, ಶಾಸಕರು ಸಪೋರ್ಟ್ ಮಾಡಿದ್ದರಿಂದ ಸಿಎಂ ಆಗಿದ್ದಾರೆ.ಎಂದು ಸಿದ್ರಾಮಯ್ಯ ದೇವೇಗೌಡರ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *