ಬೆಳಗಾವಿ- ನಾವು ಚಿಕ್ಕವರಿದ್ದಾಗ ಕಳ್ಳ ಪೋಲೀಸ್ ಆಟ ಆಡಿದ್ದು ಇವತ್ತಿಗೂ ನೆನಪಿದೆ,ಆದ್ರೆ ಇವತ್ತು ಬೆಳಗಾವಿಯಲ್ಲಿ ನಡೆದಿದ್ದೇ ಬೇರೆ,ಇಲ್ಲಿ ಕಳ್ಳರೇ ತಿರುಗಿ ಪೋಲೀಸರಿಗೆ ಬೆನ್ನಟ್ಟಿದ ಘಟನೆ ನಡೆದಿದೆ.
ಬೆಳಗಾವಿಯ ಝಾಡ ಶಹಾಪೂರ ಬಳಿ ಕಳುವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿಯಲು ಸ್ಥಳಿಯರು ಮತ್ತು ಪೋಲೀಸರು ಬೆನ್ನುಹತ್ತಿದ್ದಾರೆ,ಚಾಕು ಜಂಬಿಯಾ ಇಟ್ಟುಕೊಂಡಿದ್ದ ಈ ಮಹಾನ್ ಕಳ್ಳರು ತಿರುಗಿ ಪೋಲೀಸರಿಗೆ ಮತ್ತು ಸ್ಥಳೀಯರ ಬೆನ್ನು ಹತ್ತಿದರೂ ಪೋಲೀಸರು ಇಬ್ಬರು ಖದೀಮರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳಗಾವಿಯ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಇಬ್ಬರು ಖದೀಮರಿಗೆ ಪೋಲೀಸರು ನಿಜವಾಗಿಯೂ ಖಾಕಿ ಖದರ್ ತೋರಿಸಿದ್ದಾರೆ.
ಇಬ್ಬರು ಕಳ್ಳರು ಚಾಕು ತೋರಿಸಿ ಪೋಲೀಸರನ್ನು ಹೆದರಿಸಲು ಮಾಡಿದ ಪ್ರಯತ್ನ ವ್ಯೆರ್ಥವಾಗಿದೆ.ಈ ಇಬ್ಬರು ಕಳ್ಳರು ಮಲ್ಲಪ್ಪಾ ಗೋರಲ್ ಎನ್ನುವವರ ಮನೆಗೆ ಕಳ್ಳತನ ಮಾಡಲು ಬಂದಿದ್ದರು