ಬೆಳಗಾವಿ-ಕಾಂಗ್ರೆಸ್ಸಿನ ವಿರೋಧದ ನಡುವೆಯೂ ಸದನದಲ್ಲಿ ಸರ್ಕಾರ,ಪ್ರಬಲವಾದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ,ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿದೆ.
ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿದೇಯಕ ಅಂಗೀಕಾರವಾಗಿದೆ.ಸರ್ಕಾರ ಗೋಹತ್ಯೆ ನಿಷೇಧ ಮಸೂದೆ ವಿಧೇಯಕ ವನ್ನು ಮಂಡಿಸಿತು,ಸ್ಪೀಕರ್ ಮತಕ್ಕೆ ಹಾಕಿದಾಗ ಗೋಹತ್ಯೆ ನಿಷೇಧದ ವಿದೇಯಕದ ಪರವಾಗಿ ಹೆಚ್ಚಿನ ಮತಗಳು ಲಭಿಸಿರುವದರಿಂದ ವಿಧೇಯಕ ಅಂಗೀಕಾರವಾಗಿದೆ.
ವಿಪಕ್ಷಗಳ ಗಲಾಟೆಯ ನಡುವೆ ವಿಧೇಯಕ ಅಂಗೀಕಾರವಾಗಿದೆ, ಬಿಎಸಿ ಸಭೆಯಲ್ಲಿ ವಿಧೇಯಕ ಬಗ್ಗೆ ಹೇಳಿಲ್ಲ, ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ.ಎಂದು ಆರೋಪಿಸಿ ಮಾಜಿ ಸಿಎಂ,ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯ ಕಲಾಪ ಬಹಿಷ್ಕರಿಸಿದ್ದು ,ನಾಳೆಯೂ ಕಲಾಪಕ್ಕೆ ಬರೋದಿಲ್ಲ ಎಂದು ಹೇಳಿ ಸಿದ್ರಾಮಯ್ಯ ಹೇಳಿದ್ದಾರೆ.