ಬೆಳಗಾವಿ-ಪಗಾರ ಕೊಡಲಿಲ್ಲ ಅಂತಾ,ಡಿಸಿ ಕಚೇರಿ ಮೇಲಿಂದ ಜಿಗಿಯಲು ಹೊರಟಿದ್ದ ಸಕ್ಕರೆ ಕಾರ್ಖಾನೆಯ ನೌಕರನನ್ನು ಪೋಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ರಾಯಬಾಗದ ರೇಣುಕಾ ಶುಗರ್ ಕಾರ್ಖಾನೆಯವರು ಆರು ತಿಂಗಳಿಂದ ವೇತನ ನೀಡಿಲ್ಲ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮನನೊಂದು ಬೆಳಗಾವಿಯ ಡಿಸಿ ಕಚೇರಿ ಕಟ್ಟಡ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ನೌಕರ ಈಗ ಪೋಲೀಸರ ಅತಿಥಿ
ಶುಕ್ರವಾರ ಕೇರಳದ ಮೂಲದ ವ್ಯಕ್ತಿಯೊಬ್ಬ ನಗರದ ಜಿಲ್ಲಾಧಿಕಾರಿ ಕಚೇರಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೇರಳದ ವಾಮದೇವ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರಾಯಬಾಗದ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದನು. ಈಚೆಗೆ ಆತನು ಸೇರಿದಂತೆ ಹಲವು ಜನರನ್ನು ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಅದರಲ್ಲಿ ವಾಮದೇವ ಎಂಬಾತನು ವರ್ಗಾವಣೆ ಮಾಡದಂತೆ ಮನವಿ ಮಾಡಿಕೊಂಡಿದ್ದರು. ಆದರೂ ವರ್ಗಾವಣೆ ಮಾಡಿದ್ದರು. ಇದರಿಂದಾಗಿ ಕಾರ್ಖಾನೆಯಿಂದ ವಾಮದೇವನನ್ನು ತೆಗೆದು ಹಾಕಲಾಗಿತ್ತು. ಜತೆಗೆ ಆರು ತಿಂಗಳಿಂದ ವೇತನ ಕೂಡ ನೀಡಿರಲಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ನ್ಯಾಯ ಕೊಡಿಸಲಿಲ್ಲ ಎಂದು ಈ ನೌಕರ ಆರೋಪಿಸಿದ್ದಾನೆ
ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡು ಮಾರ್ಕೆಟ್ ಠಾಣೆಯ ಪೊಲೀಸರು ಕಟ್ಟಡ ಮೇಲೇರಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.