Breaking News

ಪಂಚಾಯತಿ ಇಲೆಕ್ಷನ್, ಏನಾದ್ರು ಸಮಸ್ಯೆ ಇದ್ರೆ,ಕಂಪ್ಲೇಂಟ್ ಮಾಡಿ

ಗ್ರಾಮ ಪಂಚಾಯತಿ ಚುನಾವಣೆ: ವೀಕ್ಷಕರಾಗಿ ಇಬ್ರಾಹಿಂ ಮೈಗೂರ ನಿಯೋಜನೆ

ಬೆಳಗಾವಿ,-  ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ 2020 ಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಗೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾ (ಆಡಳಿತ ಮತ್ತು ಮಾನವ
ಸಂಪನ್ಮೂಲ) ಇಬ್ರಾಹಿಂ ಮೈಗೂರ ಅವರನ್ನು ಚುನಾವಣಾ ವೀಕ್ಷಕರಾಗಿ ನಿಯೋಜನೆ ಮಾಡಲಾಗಿರುತ್ತದೆ.

ವೀಕ್ಷಕರು, ದಿನಾಂಕ:11.12.2020 ರಿಂದ ಬೆಳಗಾವಿಯಲ್ಲಿ ಸರ್ಕಿಟ್ ಹೌಸ್ ಹಳ ಕಟ್ಟಡದ ಕೊಠಡಿ ಸಂಖ್ಯೆ 9 ರಲ್ಲಿ ವಾಸ್ತವ್ಯ ಮಾಡಲಿದ್ದು, ಜಿಲ್ಲಾದ್ಯಂತ ಎಲ್ಲ ತಾಲೂಕುಗಳಿಗೆ ಭೇಟಿ ನೀಡುವವರು.

ಈ ಅವಧಿಯಲ್ಲಿ ಸಾರ್ವಜನಿಕರು ಅವರನ್ನು ಸಂಪರ್ಕಿಸಬಹುದಾಗಿದೆ. ಇವರ ದೂರವಾಣಿ ಸಂಖ್ಯೆ 9480881000 ಹಾಗೂ ಇವರ ಇ-ಮೇಲ್ : [email protected] ಇರುವುದು.

ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ 2020 ಕ್ಕೆ ಸಂಬಂದಪಟ್ಟಂತೆ ಯಾವುದಾದರೂ ದೂರುಗಳು ಇದ್ದಲ್ಲಿ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *