ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಯ ಚುನಾವಣೆಯ ಕಾವು ರಂಗೇರಿದೆ, ಚುನಾವಣೆಗೆ ಸ್ಪರ್ದಿಸಿರುವ ಅಭ್ಯರ್ಥಿಗಳು,ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಶುರು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆದಿದೆ. ಫೇಸ್ ಬುಕ್ ಓಪನ್ ಮಾಡಿದ್ರೆ ಸಾಕು,ಇಲೆಕ್ಷನ್ ಗೆ ನಿಂತ ಫೇಸ್ ಗಳೇ ಕಾಣಿಸುತ್ತಿವೆ,ವ್ಯಾಟ್ಸನ್, ಟ್ವಿಟರ್ ಎಲ್ಲದರಲ್ಲೂ ಈಗ ಚುವಾಣೆಯ ಪ್ರಚಾರ ರಂಗೇರಿದೆ.
ಚುನಾವಣೆ ನಡೆಯುತ್ತಿರುವ ಹಳ್ಳಿಗಳಲ್ಲಿ,ಬಾರ್ ರೆಸ್ಟೋರೆಂಟ್ ಗಳ ಬದಲು ಹೊಲ ಗದ್ದೆಗಳಲ್ಲೇ ಚಿಕನ್ ,ಮಟನ್ ಪಾರ್ಟಿಗಳು ನಡೆಯುತ್ತಿವೆ.
ಸೋಮವಾರ ನಾಮ ಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಕೆಲವು ಅಭ್ಯರ್ಥಿಗಳು,ಅವಿರೋಧ ಆಯ್ಕೆಯಾಗಿ ಗುಲಾಲು ಹಾರಿಸಿ ಸಂಬ್ರಮಿಸಿದ್ದಾರೆ.ಕಾಂ ಗ್ರೆಸ್ ಬಿಜೆಪಿ ನಾಯಕರು ಬೆಳಗಾವಿ ಜಿಲ್ಲೆಯಲ್ಲಿ ಸಂಚರಿಸಿ ಪಕ್ಷದ ಪರವಾಗಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.
ಒಟ್ಟಾರೆ ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ.ಅಭ್ಯರ್ಥಿಗಳು ಸೋಶಿಯಲ್ ಮೀಡಿಯಾ ಮೂಲಕ ಮತದಾರರನ್ನು ಓಲೈಸುತ್ತಿರುವದು ವಿಶೇಷವಾಗಿದೆ.