ಬೆಳಗಾವಿ- ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಈಗ ಉದ್ಯಮಿಗಳ ಪರವಾಗಿ ನಿಂತಿದೆ ,ಸ್ಟೀಲ್ ದರವನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ
ಸ್ಟೀಲ್ ದರದಲ್ಲಿ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿಬೆಳಗಾವಿ ಚೇಂಬರ್ ಆಫ್ ಕಾಮಸ್೯, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೋವಿಡ್-19 ಮಹಾಮಾರಿಯ ಭೀತಿಯಿಂದ ಸಣ್ಣ ಕೈಗಾರಿಕೆ ಹಾಗೂ ಮಧ್ಯಮ ಕೈಗಾರಿಕೆಯವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು. ಆದರೆ ಲಾಕ್ ಡೌನ್ ವೇಳೆಯ ನಷ್ಟವನ್ನು ಸುಧಾರಣೆ ಮಾಡುತ್ತ ಮುನ್ನುಗುತ್ತಿದ್ದೇವು. ಆದರೆ ಸ್ಟೀಲ್ ದರ ಹೆಚ್ಚಳ ಮಾಡಿರುವುದು ಮತ್ತೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಸ್ಟೀಲ್ ದರ ಹೆಚ್ಚಳ ಮಾಡಿರುವುದನ್ನು ಸರಕಾರ ಮಧ್ಯಸ್ಥಿಕೆ ವಹಿಸಿ ಕಡಿಮೆ ಮಾಡಿಸಬೇಕು. ಇಲ್ಲದಿದ್ದರೆ ಬರುವ ದಿನದಲ್ಲಿ ಮತಷ್ಟು ಸಣ್ಣ ಕೈಗಾರಿಕೆಗಳು ಬಂದ್ ಆಗುವ ಆತಂಕ ಇದೆ. ಆದ್ದರಿಂದ ಸರಕಾರ ಸ್ಟೀಲ್ ದರವನ್ನು ಕಡಿಮೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಪಂಚಾಕ್ಷರಿ ಚೋಣ್ಣದ ಅಧ್ಯಕ್ಷ, ಹೇಮೇಂದ್ರ ಕೊರವಣ್ಣ, ಬಸವರಾಜ ಜವಳಿ, ಸಂದೀಪ ಬಾಗೇವಾಡಿ, ಸಚೀನ ಸಬ್ನಿಸ್, ಕಿರಣ ಅಂಗಡಿ ರೋಹನ ಜವಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.