ಬೆಳಗಾವಿ- ಈಗ ಗ್ರಾಮ ಪಂಚಾಯತಿ ಚುನಾವಣೆ, ಎಲ್ಲ ಕಡೆ ಮಟನ್ ಪಾರ್ಟಿ,ಚಿಕನ್ ಪಾರ್ಟಿಗಳು ನಡೆಯುತ್ತಿವೆ.ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯೆಕ್ತಿಯೊಬ್ಬನನ್ನು ಕಳ್ಳನೆಂದು ಭಾವಿಸಿ ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಮಾರಿಹಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆನಂದ ಮಾರುತಿ ಕೋಲಕಾರ (58) ಎಂಬಾತ ಮೂಲತಹ ಮುಚ್ಚಂಡಿ ಗ್ರಾಮದವನಾಗಿದ್ದು ಈತ ಧಾಭಾದಲ್ಲಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿರುವಾಗ ಖನಗಾಂವ ಗ್ರಾಮದ ಹದ್ದಿಯಲ್ಲಿ ಇತನನ್ನು ಕಳ್ಳನೆಂದು ಭಾವಿಸಿ,ಈತನ ಮೇಲೆ ಹಲ್ಲೆ ಮಾಡಿ,ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಮಾರಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇತ್ತೀಚಿಗೆ ಬೆಳಗಾವಿ ನಗರ ಪೋಲೀಸ್ ಆಯುಕ್ತರ ವಲಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ