Breaking News

ಧ್ವಜ ಸ್ತಂಭ ಇರಬೇಕಾ..ಬೇಡವಾ..? ಸರ್ಕಾರ ನಿರ್ಧಾರ ಕೈಗೊಳ್ಳಲಿ

ಬೆಳಗಾವಿ- ಪರಿಷತ್ತಿನ ಉಪಸಭಾಪತಿ ಧರ್ಮೆಗೌಡ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆಯಾಗಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮೆಗೌಡ ಅವರು ಜೆಡಿಎಸ್ ನಲ್ಲಿ ಇದ್ದಾಗ ನಮಗೆ ಆತ್ಮೀರಾಗಿದ್ದರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸದ್ಯ ಅವರ ಕುಟುಂಬಸ್ಥರಿಗೆ ದೈರ್ಯ ಹೇಳಬೇಕಾಗಿದೆ, ಪರಿಷತ್ತ ನಲ್ಲಿ ಗಲಾಟೆ ನಡೆದು ಬಹಳ ದಿನ ಆಗಿದೆ. ಅದಕ್ಕೂ ಇದಕ್ಕೂ ಲಿಂಕ್ ಮಾಡೋಕೆ ಆಗಲ್ಲ.
ಅವರ ವಯಕ್ತಿಕ ಕಾರಣ ಅಥವಾ ಬೇರೆ ಕಾರಣ ಇರಬಹುದು ಎಂದರು

ರಾಜಕಾರಣದಲ್ಲಿ ಬೈದಾಡೋದು, ಆರೋಪ, ಪ್ರತ್ಯಾರೋಪ ಸಹಜ, ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋಕಾಗಲ್ಲ, ಡೆತ್ ನೋಟನಲ್ಲಿ ಏನಿದೆ, ಪ್ರಕರಣದ ಕುರಿತು ಸರಕಾರ, ಪೋಲಿಸರು ಹೇಳಬೇಕು,ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಆತ್ಮಹತ್ಯೆ ಮಾಡಿಕೊಂಡರೇ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗಬಾರದು. ಮೇಲ್ನೋಟಕ್ಕೆ ಆತ್ಮಹತ್ಯೆ ಕಂಡ್ರು ಪ್ರಕರಣದ ತನಿಖೆ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.

ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜಸ್ತಂಬ ಸ್ಥಾಪನೆ ವಿಚಾರವಾಗಿ ಮಾತನಾಡಿದ ಅವರು,ಇದರಲ್ಲಿ ನಿರ್ಧಾರವೇನಿಲ್ಲ. ಜಿಲ್ಲಾಡಳಿತ ಅಥವಾ ಸರಕಾರ ಇದು ಸರಿನಾ ತಪ್ಪಾ ಎಂಬ ನಿರ್ಧಾರ ಕೈಗೊಳ್ಳಬೇಕು, ಸರಕಾರಿ ಕಟ್ಟಡದ ಮೇಲೆ ಬಾವುಟ ಹಾರಿಸಲು ಸರಕಾರದಿಂದ ಅಧಿಕೃತ ಆದೇಶ ಇಲ್ಲ, ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಧ್ವಜಸ್ಥಂಬ ಇರಬೇಕಾ, ಬೇಡವಾ ಅಂತಾ. ಸರ್ಕಾರ ತೀರ್ಮಾನಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕಾನೂನು ನನ್ನದಲ್ಲ. ಕಾನೂನಿನಲ್ಲಿ ಏನು ಅವಕಾಶ ಇದೆ ನೋಡಿ ಸರ್ಕಾರ ಕ್ರಮ ಕೈಗೊಳ್ಳಬೇಕು, ಎಂ.ಇ.ಎಸ್ ನಿಂದ ಗಡುವು ವಿಚಾರ, ಸರಕಾರ ಬೇರೆಯವರಿಗೆ ಅವಕಾಶ ಕೊಡಬಾರದು, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಎಂ.ಇ.ಎಸ್ ನಿಂದ ಅಪಪ್ರಚಾರ ವಿಚಾರ, ಸೋಶಿಯಲ್ ಮೀಡಿಯಾದಲ್ಲಿ ಎಲ್ಲವನ್ನ ನಿಜ ಮಾಡಲಿಕ್ಕೆ ಆಗಲ್ಲ ವಾಸ್ತವ ಸ್ಥಿತಿಯೇ ಬೇರೆ ಇರುತ್ತೆ.‌ಈ ಭಾರಿಯ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿನ್ಹೆಯಲ್ಲಿ ಚುನಾವಣೆ ನಡೆಯಬೇಕು ಎಂಬ ಅಭಿಪ್ರಾಯವಿದೆ, ಕಮೀಟಿ ಕೂಡ ರಚಿಸಲಾಗಿದೆ ಮುಂದೆ ನಿರ್ಧಾರ ತಗೋತಿವಿ ಎಂದರು.

ಬೆಳಗಾವಿ ಲೋಕಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ, ಕೆಪಿಸಿಸಿ ಅಧ್ಯಕ್ಷರು ಹೇಳಿದ ಇಬ್ಬರು ಅಭ್ಯರ್ಥಿಗಳು ಯಾರು ಎಂಬುದು‌ ನನಗೆ ಗೊತ್ತಿಲ್ಲ ಎಂದ ಸತೀಶ ಜಾರಕಿಹೊಳಿ ಹೇಳಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *