ಬೆಳಗಾವಿ- ಲಂಡನ್ ನಿಂದ ಬೆಳಗಾವಿ ಜಿಲ್ಲೆಗೆ 15 ಜನ ಬಂದಿದ್ದು ಈ ಹದಿನೈದು ಜನರ ಪೈಕಿ 10 ಜನ ಬೆಳಗಾವಿ ನಗರದಲ್ಲಿದ್ದು ಉಳಿದ ಐದು ಜನ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಂಜಿ ಹಿರೇಮಠ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆಯ ಬೆಳಗಾವಿ ತಾಲ್ಲೂಕಿನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂಗ್ಲೆಂಡ್ ದಿಂದ ಬೆಳಗಾವಿಗೆ ಬಂದಿರುವ ಹದಿನೈದು ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಹದಿನೈದು ಜನರ ರಿಪೋರ್ಟ್ ನೆಗೆಟೀವ್ ಬಂದಿದೆ.ಆರೋಗ್ಯ ಇಲಾಖೆಯಿಂದ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದೇವೆ ಕೋವೀಡ್ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದ್ದೇವೆ.ಎಂದು ಡಿಸಿ ಹೇಳಿದರು.
ಕೊರೋನಾ ಕಡಿಮೆ ಇದೆ ಅಂತಾ ಜನ ನಿಶ್ಕಾಳಜಿ ಮಾಡಬಾರದು,ಸಾಮಾಜಿಕ ಅಂತರ ಕಾಯ್ದುಕೊಂಡು ,ಮಾಸ್ಕ ಹಾಕಿಕೊಂಡು ಕೋವೀಡ್ ನಿಯಮಾವಳಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಅನುಮತಿ ಪಡೆಯದೇ ಕನ್ನಡ ಧ್ವಜ ಹಾರಿಸಲಾಗಿದೆ.ಈ ಕುರಿತು ಚರ್ಚೆ ಮಾಡಲು ಹೋರಾಟಗಾರರನ್ನು ಮಾತುಕತೆಗೆ ಕರೆದಿದ್ದೇವು,ಆದ್ರೆ ಅವ್ರು ಮಾತುಕತೆಗೆ ಬಂದಿಲ್ಲ.ಶೀಘ್ರದಲ್ಲಿಯೇ ಈ ಕುರಿತು ಸಭೆ ಕರೆದು ಪರಶೀಲನೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.