ಫಸ್ಟ್ ಡೇ…ಫಸ್ಟ್ ಶೋ…ಹೌಸ್ ಫುಲ್…!!

 

ಬೆಳಗಾವಿ-ಸರ್ಕಾರ ಇಂದಿನಿಂದ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ದ್ವೀತಿಯ ವರ್ಷದ ತರಗತಿಗಳನ್ನು ಆರಂಭಿಸಿದ್ದು,ಬೆಳಗಾವಿಯಲ್ಲಿ ಇಂದು ಮೊದಲನೇಯ ದಿನ ಸಕತ್ತ್ ರಿಸ್ಪಾನ್ಸ್ ಸಿಕ್ಕಿದೆ.

ಬೆಳಗಾವಿ ನಗರದಲ್ಲಿ ಶಾಲೆ ಆರಂಭೋತ್ಸವದ ಮೊದಲ ದಿನ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಲ್ಲಿ ಭಾಗವಹಿಸಿದ್ದಾರೆ. ಕಾಲೇಜುಗಳಲ್ಲಿಯೂ ಪಿಯುಸಿ ದ್ವೀತಿಯ ವರ್ಷದ ವಿಧ್ಯಾರ್ಥಗಳು ಸರ್ಕಾರದ ಕರೆಗೆ ಓಗೊಟ್ಟು ತರಗತಿಗಳಲ್ಲಿ ಭಾಗವಹಿಸಿದ್ದಾರೆ

ಬೆಳಗಾವಿಯ ಸರ್ದಾರ ಹೈಸ್ಕೂಲ್ ಮತ್ತು ಕಾಲೇಜು,ವನಿತಾ ವಿದ್ಯಾಲಯ,ಮಹಿಳಾ ವಿದ್ಯಾಲಯ ಸೇರಿದಂತೆ ನಗರದಲ್ಲಿ ಬಹುತೇತ ಎಲ್ಲ ಹೈಸ್ಕೂಲ್ ಮತ್ತು ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಂದ ಮೊದಲನೆಯ ದಿನ ಉತ್ತಮ ಸ್ಪಂದನೆ ಸಿಕ್ಕಿದೆ.

ಎಲ್ಲ ಹೈಸ್ಕೂಲ್ ಮತ್ತು ಕಾಲೇಜುಗಳಲ್ಲಿ ಕೋವೀಡ್ ನಿಯಮಾವಳಿಗಳನ್ನು ಪಾಲಿಸಲಾಗುತ್ತಿದೆ,ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ವ್ಯೆವಸ್ಥೆ ಮಾಡಲಾಗಿದ್ದು,ವಿದ್ಯಾರ್ಥಿಗಳು ಮಾಸ್ಕ ಹಾಕಿಕೊಂಡು,ಸೈನಿಟೈಸರ್ ಜೊತೆಗೆ ಶಾಲೆಗೆ ಬರುತ್ತಿರುವದು ವಿಶೇಷ..

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *