ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಕೊರೋನಾ ವ್ಯಾಕ್ಸೀನ್ ಲಸಿಕೆ ನೀಡುವ ಡೆಮೋ ಯಶಸ್ವಿಯಾಗಿ ನಡೆಯಿತು
ಬೆಳಗಾವಿ ನಗರದ ವಂಟಮೂರಿ ಸ್ಮಾರ್ಟ್ ಸಿಟಿ ಆಸ್ಪತ್ರೆ,ಹುಕ್ಕೇರಿಯ ತಾಲ್ಲೂಕು ಆಸ್ಪತ್ರೆ ಮತ್ತು ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದ ವ್ಯಾಕ್ಸೀನ್ ಡೆಮೋ ಯಶಸ್ವಿಯಾಗಿ ನಡೆಯಿತು.
ಕೋವೀನ್ ಆ್ಯಪ್ ನಲ್ಲಿ ಹೆಸರು ನೊಂದಾಯಿಸಿದ ತಲಾ 25 ಜನ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಡ್ರೈರನ್ ನಲ್ಲಿ ಭಾಗವಹಿಸಿದ್ದರು, ಹೆಸರು ನೊಂದಾಯಿಸಿದ 25 ಜನ ನಿಗದಿತ ಸಮಯಕ್ಕೆ ಬೆಳಗಾವಿಯ ಸ್ಮಾರ್ಟ್ ಸಿಟಿ ಆಸ್ಪತ್ರೆಗೆ ಆಗಮಿಸಿದ್ದರು,ನೊಂದಾಯಿತ 25 ಜನ ಮೊದಲು ತಮ್ಮ ಹೆಸರುಗಳನ್ನು ವ್ಯಾಕ್ಸೀನ್ ನೀಡುವ ಕೇಂದ್ರದಲ್ಲಿ ನೊಂದಾಯಿಸಿದರು,ನಂತರ,ದಾಖಲೆಗಳ ಪರಶೀಲನೆ,ಅದಾದ ಬಳಿಕ ವ್ಯಾಕ್ಸೀನೇಶನ್ ವ್ಯಾಕ್ಸೀನ್ ನೀಡಿದ ಬಳಿಕ ಆಬಸರ್ವೇಶನ್ ಹೇಗೆ ನಡೆಯುತ್ತದೆ ಎನ್ನುವದರ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು.ಈ ಡೆಮೋ ಯಾವುದೇ ಅಡೆತಡೆ ಇಲ್ಲದೇ ಸುಗಮವಾಗಿ ನಡೆಯಿತು.
ವ್ಯಾಕ್ಸೀನ್ ನೀಡಿದ ಬಳಿಕ ಯಾರಿಗಾದರೂ ರಿಯಾಕ್ಷನ್ ಅಂದ್ರೆ ಅಡ್ಡ ಪರಿಣಾಮ ಆದಲ್ಲಿ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಅನ್ನೋದರ ಬಗ್ಗೆಯೂ ಡೆಮೇ ನಡೆಯಿತು.
ವ್ಯಾಕ್ಸೀನ್ ಡೆಮೋ ಕೇಂದ್ರಕ್ಕೆ ಜಿಲ್ಲಾಧಿಕಾರಿ ಹಿರೇಮಠ ಭೇಟಿ ನೀಡಿ ವ್ಯೆವಸ್ಥೆಯ ಪರಶೀಲನೆ ಮಾಡಿದರು ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ವ್ಯಾಕ್ಸೀನ್ ಲಸಿಕೆ ನೀಡುವ ಕುರಿತು ಬೆಳಗಾವಿ ಜಿಲ್ಲೆಯ 28 ಸಾವಿರಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ವೈದ್ಯಕೀಯ ಸಿಬ್ಬಂಧಿಗೆ ತರಬೇತಿ ನೀಡಲಾಗಿದೆ.ಸರ್ಕಾರ ಲಸಿಕೆ ನೀಡಲು ಆರಂಭಿಸಿದ ಬಳಿಕ ತರಬೇತಿ ಪಡೆದ ಸಿಬ್ಬಂಧಿಗಳು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಡಿಸಿ ಹಿರೇಮಠ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ 8 ಲಕ್ಷ ವ್ಯಾಕ್ಸೀನ್ ಗಳನ್ನು ಸ್ಟೋರ್ ಮಾಡುವ ಸಾಮರ್ಥ್ಯ ಇದೆ,ಸರ್ಕಾರದ ನಿರ್ದೇಶನದಂತೆ ಲಸಿಕೆ ನೀಡಲಾಗುತ್ತದೆ ,ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ನಡೆಸಿದ ಡ್ರೈರನ್ ಯಶಸ್ವಿ ಆಗಿದೆ ಎಂದು ಡಿಸಿ ಹೇಳಿದರು.