ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಎದುರು ಹಾರಿಸಿರುವ ಕನ್ನಡದ ಸ್ವಾಭಿಮಾನದ ಧ್ವಜವನ್ನು ತೆರವು ಮಾಡುವಂತೆ ಆಗ್ರಹಿಸಿ,ಎಂಈಎಸ್ ಮತ್ತು ಶಿವಸೇನೆಯ ಮುಖಂಡರು,ಗಲಾಟೆ ಶುರು ಮಾಡಿದ್ದಾರೆ.
ಧ್ವಜ ತೆರವು ಮಾಡುವಂತೆ ಆಗ್ರಹಿಸಿ ಡಿಸಿ ಕಚೇರಿಗೆ ಆಗಮಿಸಿದ ಈ ನಾಡವಿರೋಧಿಗಳು ನಾವು ತಕ್ಷಣ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಬೇಕು,ಎಂದು ಡಿಸಿ ಕಚೇರಿಗೆ ನುಗ್ಗುಲು ಪ್ರಯತ್ನಿಸಿದಾಗ ಪೋಲೀಸರು ಅವರನ್ನು ತಡೆದಿದ್ದಾರೆ.
ಪಾಲಿಕೆ ಎದುರು ಹಾರಿಸಿರುವ ಕನ್ನಡ ಧ್ವಜವನ್ನು ಕೂಡಲೇ ತೆರವು ಮಾಡಬೇಕು ಇಲ್ಲವಾದಲ್ಲಿ ಜನೇವರಿ 21 ರಂದು ಪಾಲಿಕೆ ಎದುರು ಭಗವಾ ಧ್ವಜ ಹಾರಿಸುತ್ತೇವೆ ಎಂದು ನಾಡವಿರೋಧಿಗಳು ಜಿಲ್ಲಾಡಳಿತಕ್ಕೆ ಧಮಕಿ ಹಾಕಿದ್ದಾರೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					