Breaking News

ಕರ್ತವ್ಯ ಲೋಪ ಇಬ್ಬರು FDA ಗಳು ಸೇವೆಯಿಂದ ಡಿಸ್ಮಿಸ್…!!

ಬೆಳಗಾವಿ, -ಪೂರ್ವಾನುಮತಿ ಇಲ್ಲದೆ ದೀರ್ಘ ಅವಧಿಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾಗಿ ಕರ್ತವ್ಯಲೋಪ ಎಸಗಿರುವ ಹಿನ್ನಲೆಯಲ್ಲಿ ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು (ಎಫ್.ಡಿ.ಎ) ಸರ್ಕಾರಿ ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶ ಹೊರಡಿಸಿರುತ್ತಾರೆ.

ರಾಮದುರ್ಗ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ. ಎನ್. ನಾಗೂರ ಹಾಗೂ ರಾಯಬಾಗ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಎ.ಬಿ. ಬಸರಗಿ ಅವರು ದೀರ್ಘಾವಧಿ ಕಾಲ ಅನಧಿಕೃತ ಗೈರು ಹಾಜರಿಯಾಗಿ ಕರ್ತವ್ಯ ನಿಯೋಜನೆಯ ಜವಾಬ್ದಾರಿಯನ್ನು ನಿಭಾಯಿಸದೇ ಕರ್ತವ್ಯಲೋಪ ಎಸಗಿರುವ ಆಪಾದನೆ ಸಾಬೀತಾಗಿರುತ್ತದೆ.

ಪ್ರಥಮ ದರ್ಜೆ ಸಹಾಯಕ ಸಿ.ಎನ್. ನಾಗೂರ ಅನಧಿಕೃತ ಗೈರುಹಾಜರಿ ಆಗಿರುವ ಕುರಿತು ರಾಮದುರ್ಗ ತಹಶೀಲ್ದಾರ್ ಇವರು ಕಾರಣ ಕೇಳಿ ಲಿಖಿತ ನೋಟಿಸ್ ಜಾರಿಗೊಳಿಸಿರುತ್ತಾರೆ ಆದರೂ ಸೂಕ್ತ ಕಾರಣ ಹಾಗೂ ದಾಖಲಾತಿಗಳನ್ನು ಹಾಜರುಪಡಿಸಿರುವುದಿಲ್ಲ.

ಅದೇ ರೀತಿಯಲ್ಲಿ ಪ್ರಥಮ ದರ್ಜೆ ಸಹಾಯಕ ಎ.ಬಿ. ಬಸರಗಿ ಅವರು ಲಿಖಿತ ಹೇಳಿಕೆ ಸಲ್ಲಿಸಿದ್ದು, ಕಾರಣ ಸಮಂಜಸವಾಗಿಲ್ಲ ಎಂದು ಸತ್ಯಾಸತ್ಯತೆ ಪರಿಶೀಲಿಸಿದಾಗ ನೌಕರರ ಮೇಲೆ ಇರುವ ಆಪಾದನೆಯ ಸಾಬೀತಾಗಿರುತ್ತದೆ.

ಆದಕಾರಣ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 8 (viii)ರ ಮೇರೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸರ್ಕಾರಿ ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
***

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *