ಬೆಳಗಾವಿ-ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಟಿಪ್ಪರ್ ನಲ್ಲಿ ಕಸ ತುಂಬಿಕೊಂಡು ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡಲು ಹೋಗಿದ್ದ,ಬೆಳಗಾವಿ ಪಾಲಿಕೆ ಸಫಾಯಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ.
ತುರಮರಿ ಕಚರಾ ಡಿಪೋದಲ್ಲಿ ಕಸ ಡಂಪ್ ಮಾಡುವಾಗ ಟಿಪ್ಪರಿನ ಹೈಡ್ರೋಲೀಕ್ ಪೈಪ್ ತಲೆಗೆ ಬಡಿದು ಸಫಾಯಿ ಕಾರ್ಮಿಕ ಮೃತಪಟ್ಟಿದ್ದಾನೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಫಾಯಿ ಕಾರ್ಮಿಕನಾಗಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ,ಕಂಗ್ರಾಳಿ ಖುರ್ದ ಗ್ರಾಮದ ಜ್ಯೋತಿನಗರದ,ಕಲ್ಲಪ್ಪಾ ಕಾಂಬಳೆ ಮೃತಪಟ್ಟಿದ್ದು,ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕಲ್ಲಪ್ಪಾ ಕಾಂಬಳೆ ಗುತ್ತಿಗೆ ಆಧಾರದ ಮೇಲೆ ಪಾಲಿಕೆಯಲ್ಲಿ ಸಫಾಯಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಗೊತ್ತಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ