Breaking News

ಬೆಳಗಾವಿಯಲ್ಲಿ ಅಮೀತ ಶಾ ಕೋರ್ ಕಮೀಟಿ ಮೀಟೀಂಗ್ ಮಾಡ್ತಾರೆ…!!

ಬೆಳಗಾವಿ-ರಾಜ್ಯಕ್ಕೆ ಎರಡು ದಿನ ಅಮಿತ್ ಶಾ ಬರ್ತಾಯಿದ್ದಾರೆ 16 ರಂದು ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರ್ತಾರೆ. ಬೆಂಗಳೂರಿನಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡ್ತಾರೆ. ಭದ್ರವಾತಿಗೆ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬೆಂಗಳೂರಿಗೆ ವಾಸ್ತವ್ಯಕ್ಕೆ ಬರಲಿದ್ದಾರೆ. 17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಕ್ಕೆ ಬರಲಿದ್ದಾರೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು
ಬೆಳಗ್ಗೆ ಬಾಗಲಕೋಟೆ ಯಲ್ಲಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿ ಮರಳಿ ಬೆಳಗಾವಿ ಗೆ ಬರಲಿದ್ದಾರೆ. ಮಧ್ಯಾಹ್ನ ಬೆಳಗಾವಿಯಲ್ಲಿ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆ ಬಳಿಕ ಬೆಳಗಾವಿಯಲ್ಲಿ ಅಮಿತ್ ಶಾ ಕೋರಕಮಿಟಿ ಮೀಟಿಂಗ್ ಬೆಳಗಾವಿಯಲ್ಲೇ ಮಾಡಲಿದ್ದಾರೆ. ಅನಂತರ ದಿವಂಗತ ಸುರೇಶ್ ಅಂಗಡಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ ಎಂದು ಸವದಿ ಹೇಳಿದರು‌

ಅಮಿತ್ ಶಾ ಕಾರ್ಯಕ್ರಮ ಕ್ಕೆ ಕಾಂಗ್ರೆಸನವರ ವಿರೋಧ ವಿಚಾರ. ಕಾಂಗ್ರೆಸನವರಿಗೆ ಕೆಲಸವಿಲ್ಲ. ವಿರೋಧ ಪಕ್ಷ ಅಂದ್ರೆ ಎಲ್ಲದಕ್ಕೂ ವಿರೋಧ ಮಾಡೋದು ಅಂದುಕೊಂಡಿದ್ದಾರೆಕಾಂಗ್ರೆಸನವರು ಬೇಕಾದ್ರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕರೆಸಿ ಸಮಾವೇಶ ಮಾಡಲಿ, ಕೋವಿಡ್ ನಿಯಮ ಪಾಲಿಸಿ ಸಮಾವೇಶ ಮಾಡ್ತಿವಿ.ಎಂದು ಡಿಸಿಎಂ ಸವದಿ ಹೇಳಿದ್ದಾರೆ.

ಪಕ್ಷದಲ್ಲಿ ಭಿನ್ನಮತ,ಅಸಮಾಧಾನ ಸಹಜವಾಗಿಯೇ ಇರುತ್ತವೆ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅವರಿಗೆ ಬೇಸರ ಆಗಿರುತ್ತೆದೆ. ಬೇಸರದಿಂದ ಅಸಮಾಧಾನ ಹೊರ ಹಾಕ್ತಾರೆ. ಇವು ಬಿಜೆಪಿ ಪಕ್ಷದ ಕುಟುಂಬದ ಮಧ್ಯದಲ್ಲಿ ಇರುವ ಅಸಮಾಧಾನ. ಅವೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ, ಪಕ್ಷದಲ್ಲಿ ನೋವವನ್ನ ತೊಡಿಕೊಳ್ಳಲು ಮುಕ್ತ ಅವಕಾಶವಿದೆ, ನಮ್ಮ ನಾಯಕರಿಗೆ ನೋವು ತೊಡಿಕೊಳ್ಳದೇ ಮತ್ಯಾರಿಗೆ ತೊಡಿಕೊಳ್ಳಬೇಕು, ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ನೋಡೋಣಾ ಇನ್ನುಸ್ವಲ್ಪದಿನ ಬಳಿಕ ಮಾತಮಾಡೋಣ ಎಂದರು ಲಕ್ಷ್ಮಣ ಸವದಿ

 

.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *