Breaking News

ಸಿಡಿ ಪಾಲಿಟೀಕ್ಸ್ ಶುರು ಆಗಿದ್ದೇ ಬೆಳಗಾವಿಯಿಂದ ….!!!

ಬೆಳಗಾವಿ- ಸಿಡಿ ಇದೇ ಅದನ್ನು ರಿಲೀಸ್ ಮಾಡ್ತೀವಿ ,ನಮಗೆ ಅನುದಾನ ಕೊಡದಿದ್ದರೆ ಅದನ್ನು ರಿಲೀಸ್ ಮಾಡ್ತೀವಿ ಅಂತಾ ಈಗ ಸಿಎಂ ಯಡಿಯೂರಪ್ಪ ಅವರಿಗೆ ಹೆದರಿಸಿ,ಬೆದರಿಸಿ ಅನುದಾನ ಪಡೆಯುತ್ತಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಪ್ರಕಟವಾಗಿದೆ.

ಮಾಜಿ ಕೇಂದ್ರ ಸಚಿವ ಬಸವರಾಜ್ ಯತ್ನಾಳ ಅವರು ಸಿಡಿ ತೋರಿಸಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಬೆಂಗಳೂರಿನ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ಅವರು ವಿಶೇಷ ಅನುದಾನ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದ್ದು ಸತ್ಯ ಅನಿಸುತ್ತಿದೆ ಯಾಕಂದ್ರೆ ಲಕ್ಷ್ಮೀ ಹೆಬ್ಬಾಳಕರ ಅವರ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ,ಬಿಜೆಪಿ ಸರ್ಕಾರ ಇದ್ದರೂ ಕಾಂಗ್ರೆಸ್ ಶಾಸಕಿಯ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ಬಿಡುಗಡೆ ಆಗುತ್ತಿರುವದು ಯಾತಕ್ಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.ಲಕ್ಷ್ಮೀ ಹೆಬ್ಬಾಳಕರ ಒಂದು ಕಡೆ ನನ್ನ ಕ್ಷೇತ್ರಕ್ಕೆ ಲಕ್ಷ ರೂ ಅನುದಾನ ಪಡೆಯುವದು ಕಷ್ಟ,ಆದರೂ ನಾನು ನನ್ನ ಕ್ಷೇತ್ರದಲ್ಲಿ ಕೋಟಿ,ಕೋಟಿ ರೂಗಳ ಕಾಮಗಾರಿ ಮಂಜೂರು ಮಾಡಿಸುತ್ತಿದ್ದೇನೆ ಅಂತಾ ಸ್ವತಹ ಅವರೇ ಹೇಳಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಗಳನ್ನು ಸಾಕ್ಷಿಯಾಗಿ ಇಟ್ಟಿವೆ.

ಬಸವರಾಜ್ ಯತ್ನಾಳ ಆರೋಪ ಮಾಡಿದ್ದು ಸುಳ್ಳೋ,ಅಥವಾ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದ್ದು ಸುಳ್ಳೋ,ಎನ್ನುವದನ್ನು ಸಿಎಂ ಯಡಿಯೂರಪ್ಪ ಅವರೇ ಅದನ್ನು ಸ್ಪಷ್ಟ ಪಡಿಸಬೇಕಾಗಿದೆ.

ರಾಜ್ಯದಲ್ಲಿ ಈಗ ಸಿಡಿ ಪಾಲಿಟೀಕ್ಸ್ ಶೂರುವಾಗಿದೆ,ಆದ್ರೆ ಈ ಸಿಡಿ ಪಾಲೀಟೀಕ್ಸ್ ಶುರು ಆಗಿದ್ದೇ ಬೆಳಗಾವಿಯಿಂದ ಯಾಕಂದ್ರೆ 2000 ನೇಯ ಇಸ್ವಿಯಲ್ಲಿ ಆಗಿನ ಕೆಪಿಸಿಸಿ ಅದ್ಯಕ್ಷರಾಗಿದ್ದ,ವ್ಹೀಎಸ್ ಕೌಜಲಗಿ ಅವರು ಖಾನಾಪೂರ ಗೆಸ್ಟ್ ಹೌಸ್ ನಲ್ಲಿ ಒಬ್ಬರ ಜೊತೆ ರಾತ್ರಿ ಕಳೆದಿದ್ದಾರೆ ಅದರ ಸಿಡಿ ನಮ್ಮ ಬಳಿ ಇದೆ ಎಂದು ಎಂದು ಕೆಲವರು ಸುದ್ಧಿ ಎಬ್ಬಿಸಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನ ಸೆಳೆದಿದ್ದರು,ಈ ಘಟನೆ ನಡೆದಿದ್ದು ನಿಜವಾಗಿತ್ತು ಆದ್ರೆ ಸಿಡಿ ಅವರ ಬಳಿ ಇರದಿದ್ದರೂ ವ್ಹೀ ಎಸ್ ಕೌಜಲಗಿ ಅವರನ್ನು ಕೆಪಿಸಿಸಿ ಅದ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಿಸುವಲ್ಲಿ ಅವರ ವಿರೋಧಿಗಳು ಯಶಸ್ವಿ ಆಗಿದ್ದರು.

2000 ರಲ್ಲಿ ಕೆಪಿಸಿಸಿ ಅದ್ಯಕ್ಷರಾಗಿದ್ದ, ವ್ಹೀ ಎಸ್ ಕೌಜಲಗಿ ಅವರು ಖಾನಾಪೂರದ ಗೇಸ್ಟ್ ಹೌಸ್ ನಲ್ಲಿ ಯಾರ ಜೊತೆ ರಾತ್ರಿ ಕಳೆದಿದ್ದರೋ ಅದು ಸಾಭೀತು ಆಗಲೇ ಇಲ್ಲ,ಆದ್ರೆ ಅವರು ಅರಭಾಂವಿ ಕ್ಷೇತ್ರದ ಗುತ್ತಿಗೆದಾರನಿಂದ ಲಂಚ ಪಡೆದಿರುವ ಸಿಡಿ ರಾಜ್ಯದಲ್ಲಿ ಸದ್ದು ಮಾಡಿ ವ್ಹೀ ಎಸ್ ಕೌಜಲಗಿ ಅವರ ಕೆಪಿಸಿಸಿ ಅದ್ಯಕ್ಷ ಸ್ಥಾನವನ್ನೇ ಬಲಿ ಪಡೆದುಕೊಂಡಿತ್ತು.

2000 ನೇಯ ಅವಧಿಯಲ್ಲಿ ವದಹೀ ಸ್ ಕೌಜಲಗಿ ಅವರ ಕೆಪಿಸಿಸಿ ಅದ್ಯಕ್ಷ ಸ್ಥಾನ ಸಿಡಿ ಗೆ ಬಲಿಯಾಯಿತು, ಈ ಅವಧಿಯಲ್ಲಿ ಈ ಸಿಡಿ ಪ್ರಕರಣ ರಾಷ್ಟ್ರದ ಗಮನ ಸೆಳೆಯಿತು,ರಾಷ್ಟ್ರೀಯ ಚಾನೆಲ್ ಗಳಲ್ಲಿ ಇದು ಪ್ರಸಾರ ಆಗಿತ್ತು, ಆದ್ರೆ ವ್ಹೀ ಎಸ್ ಕೌಜಲಗಿ ಅವರ ಆಪ್ತರು ಆಗಿದ್ದ ಅಶೋಕ ಚಂದರಗಿ,ಮತ್ತು ಶಂಕರ ಮುನವಳ್ಳಿ ಅವರು ಕೌಜಲಗಿ ಲಂಚ ಪಡೆದಿರುವ ಸಿಡಿ ಶುದ್ಧ ಸುಳ್ಳು ಎಂದು ರಾಜ್ಯ ಸರ್ಕಾರದ ಜಾಗ್ರತ ದಳಕ್ಕೆ ದೂರು ನೀಡಿದರು,ತನಿಖೆ ಮಾಡಿದ ಜಾಗೃತ ದಳ ವ್ಹೀ ಎಸ್ ಕೌಜಲಗಿ ಲಂಚ ಪಡೆದಿರುವ ಸಿಡಿ ಸುಳ್ಳು,ಎಂದು ವರದಿ ನೀಡಿತು,ಈ ವರದಿ ಆಗಿನ ಪ್ರಸಿದ್ದ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಈ ವರದಿ ಪ್ರಕಟ ಆಗಿತ್ತು ಈ ವರದಿಯನ್ನು ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಿಸಿಕೊಂಡು ಅಶೋಕ ಚಂದರಗಿ ಮತ್ತು,ಶಂಕರ ಮುನವಳ್ಳಿ ಅವರು ದೆಹಲಿಗೆ ಹೋಗಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ,ಕೆಪಿಸಿಸಿ ಅದ್ಯಕ್ಷ ಸ್ಥಾನ ಕಳೆದುಕೊಂಡಿದ್ದ ವಿ ಎಸ್ ಕೌಕಲಗಿ ಅವರಿಗೆ 2002 ರಲ್ಲಿ ಮಂತ್ರಿ ಸ್ಥಾನ ಕೊಡಸಿದ್ದರು.

ಈ ಸಿಡಿ ಪಕ್ರಕರಣ ರಾಷ್ಟ್ರದ ಗಮನ ಸೆಳೆದಂತೆ ಈಗ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ,ರಾಜ್ಯ ಸರ್ಕಾರವನ್ನೇ ಅಲ್ಲಾಡಿಸುವ ಹಂತ ತಲುಪಿದೆ, 2000 ನೇಯ ಅವಧಿಯಲ್ಲಿ ಸದ್ದು ಮಾಡಿದ ಸಿಡಿ ಸುಂದರಿ ಯಾರು,,? ಪ್ರಚಲಿತ ಸಿಡಿಯ ಸುಂದರಿ ಮತ್ತು ಹಿರೋ ಯಾರು..? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದ್ದು,ಸಿಡಿ ಬಿಡುಗಡೆ ಆದ ಮೇಲೇಯೇ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಠ ಉತ್ತರ ಸಿಗಲಿದೆ…

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *