Breaking News

ಬೆಳಗಾವಿ ಕಡೆ,ಬೆಂಗಳೂರು ನಾಯಕರ ಪಡೆ….!!

ಬೆಳಗಾವಿ- ಬೆಳಗಾವಿಯಲ್ಲಿ ಶಿವಸೇನೆ,ಮತ್ತು ಎಂಈಎಸ್ ಕಿರಿಕ್ ಹೆಚ್ಚಾಗುತ್ತಿದ್ದಂತೆಯೇ,ಬೆಂಗಳೂರಿನ ಕನ್ನಡ ಸಂಘಟನೆಗಳ ನಾಯಕರು ಈಗ ಬೆಳಗಾವಿಯತ್ತ ಮುಖ ಮಾಡಿದ್ದು,ದಿನಕ್ಕೊಂದು ಕನ್ನಡ ಸಂಘಟನೆ ಬೆಳಗಾವಿಗೆ ಆಗಮಿಸಿ ಕನ್ನಡಿಗರ ಬೆಂಬಲಕ್ಕೆ ನಿಲ್ಲುತ್ತಿವೆ.

ಇಂದು ಕನ್ನಡದ ರಣಧೀರ ವಾಟಾಳ್ ನಾಗರಾಜ್ ಅವರು ಹಲವಾರು ವರ್ಷಗಳ ಬಳಿಕ,ಹಿರೇಬಾಗೇವಾಡಿ ಟೋಲ್ ದಾಟಿ ಬೆಳಗಾವಿಯ ಚನ್ನಮ್ಮ ಸರ್ಕಲ್ ಗೆ ಆಗಮಿಸಿ,ಹೋರಾಟ ಮಾಡಿ,ಎಂಈಎಸ್ ಮತ್ತು ಶಿವಸೇನೆಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಬೆಳಗಾವಿಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟಿದೆ, ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ, ಬೇರೆ ರಾಜ್ಯದಿಂದ ಶಿವಸೇನೆ ನುಗ್ಗಿ ಕರ್ನಾಟಕಕ್ಕೆ ಬರುವವರೆಗೂ ಬಿಡಬಾರದಿತ್ತು ಶಿವಸೇನೆಗೆ ಜೈಲಿನಲ್ಲಿ ಇಡಬೇಕಿತ್ತು, ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಭಾವುಟ ಹಾಕುವುದಕ್ಕೆ ಅಡ್ಡಿಪಡಿಸಿದ್ದು ಅತ್ಯಂತ ಅಗೌರ‌ವ, ಎಂಇಎಸ್ ರದ್ದು ಮಾಡಬೇಕು, ಎಂಇಎಸ್ ಇರಬಾರದು ಕರ್ನಾಟಕ ಏಕೀಕರಣ ಸಮಿತಿ ಇರಬೇಕು ಎಂದು ವಾಟಾಳ್ ಹೇಳಿದರು.

ಮುಂದಿನ ದಿನದಲ್ಲಿ ಬೆಳಗಾವಿ ಉದ್ದಗಲಕ್ಕೂ ಕನ್ನಡ ಬಾವುಟ ಹಾಕುತ್ತೇವೆ,ಬೆಳಗಾವಿಯಲ್ಲಿರುವ ಎಂಇಎಸ್ ಮುಖಂಡರು ಮಹಾರಾಷ್ಟ್ರ ಬೇಕು ಅನ್ನುವ ಹಾಗಿದ್ರೇ ಉದ್ಧವ್ ಠಾಕ್ರೆ ಹತ್ರಾ ಹೋಗ್ಲೀ, ಎಂಇಎಸ್ ನಾಯಕರನ್ನು ಕರೆಸಿ ಪೊಲೀಸರು ಸಭೆ ಮಾಡ್ತಾರೆ ಯಾಕೆ ಸಭೆ ಮಾಡಬೇಕು ಎಂದು ಪ್ರಶ್ನೆ ಮಾಡಿದ ಅವರು,ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ಸಂಘಟನೆ ವಜಾ ಮಾಡಬೇಕು,ಎಂಇಎಸ್ ಸಂಘಟನೆ ಮುಖಂಡರಿಂದ ಮುಚ್ಚಳಿಕೆ ಬರಿಸಿಕೊಳ್ಳಬೇಕು,ಮರಾಠಿ ಪರ ಮಾತಾಡಿದ್ರೇ ಮಹಾರಾಷ್ಟ್ರಕ್ಕೆ ಹೋಗಬೇಕು ಅಂತಾ ಬರೆಸಿಕೊಳ್ಳಬೇಕು,ಎಂದರು

ಯಡಿಯೂರಪ್ಪ ಅವರಿಗೆ ಇದನ್ನ ಮಾಡುವ ಶಕ್ತಿ ಇಲ್ಲ,ಈ ರಾಜ್ಯವನ್ನ ಯಡಿಯೂರಪ್ಪ ನಾಶ ಮಾಡುತ್ತಿದ್ದಾರೆ, ಈ ರಾಜ್ಯದ ಅತ್ಯಂತ ಅನಿಷ್ಠ ಮುಖ್ಯಮಂತ್ರಿ ಯಡಿಯೂರಪ್ಪ,ವರವಾಗುವ ಬದಲು ಯಡಿಯೂರಪ್ಪ ರಾಜ್ಯಕ್ಕೆ ಶಾಪವಾಗಿದ್ದಾರೆ,ಕರ್ನಾಟಕ ಇತಿಹಾಸದಲ್ಲಿ ಇಂತಹ ಭ್ರಷ್ಟ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ,ಈ ರಾಜ್ಯ ಉಳಿಯಬೇಕು ಅಂದ್ರೇ ಕೂಡಲೇ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ವಾಟಾಳ್ ಆಗ್ರಹಿಸಿದರು.

ಇನ್ನೂ ಹದಿನೈದು ದಿನಗಳಲ್ಲಿ ಎಂಇಎಸ್ ರಾಜ್ಯ ಬಿಡಬೇಕು, ಇಲ್ಲವಾದ್ರೇ ಬೆಳಗಾವಿಗೆ ನಾವು ನುಗ್ಗುತ್ತೇವೆ. ಶಿವಸೇನೆ ಪುಂಡರು ರಾಜ್ಯಕ್ಕೆ ನುಗ್ಗಿ ಗುಂಡಾವರ್ತನೆ ಮಾಡಿದ್ದಾರೆ,ಉದ್ಧವ್ ಠಾಕ್ರೆ ಬಂದ್ರೂ ಜೈಲಿಗೆ ಹಾಕಬೇಕು, ಯಾವುದೇ ಶಿವಸೇನೆಯವರು ಗಡಿ ದಾಟಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು, ಇಲ್ಲಿನ ರಾಜಕಾರಣಿಗಳು ನರ ಸತ್ತ ರಾಜಕಾರಣಿಗಳು ಎಂಇಎಸ್ ಏಜೆಂಟ್‌ ರಾಗಿದ್ದಾರೆ, ಮರಾಠಿ ಏಜೆಂಟರಾಗಿದ್ದಾರೆ. ಎಂಇಎಸ್ ನಿಷೇಧ ಮಾಡ್ಲಿ ಇಲ್ಲಾ ನಮ್ಮನ್ನ ವರ್ಷಗಟ್ಟಲೇ ಜೈಲಿಗೆ ಹಾಕಲಿ,ಅವಿವೇಕಿಗಳು, ಅವರು ಸೋತ್ರು ಆಮೇಲೆ ಎಂಎಲ್ಸಿ ನಂತರ ಡಿಸಿಎಂ ಮಾಡಿದ್ರೂ,ಎಂದು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ದ ವಾಟಾಳ್ ನಾಗರಾಜ್ ಪರೋಕ್ಷ ವಾಗ್ದಾಳಿ ನಡೆಸಿದ್ರು,

ಪಾಲಿಕೆ ಮುಂದಿರುವ ಕನ್ನಡ ಧ್ವಜ ತೆಗೆದ್ರೇ ರಕ್ತಪಾತವಾಗುತ್ತೆ, ಹದಿನೈದು ದಿನ ಗಡುವು ಕೊಟ್ಟಿದ್ದೇವೆ ಅದ್ರಲ್ಲಿ ತೀರ್ಮಾನ ಆಗದಿದ್ದರೆ ಕರ್ನಾಟಕ ಬಂದ್ ಕರೆಗೆ‌ ಯೋಚನೆ ಮಾಡುತ್ತೇವೆ ಎಂದರು ವಾಟಾಳ್

ಟೋಪಣ್ಣವರ,ಜೋಶಿ,ಸಿದ್ಧನಗೌಡರ ಹೆಸರಿಡಿ…

ಮಹಾದೇವ ಟೋಪಣ್ಣವರ,ರಾಘವೇಂದ್ರ ಜೋಶಿ,ಮತ್ತು ಸಿದ್ಧನಗೌಡ ಪಾಟೀಲ ಅವರು ಬೆಳಗಾವಿ ಗಡಿಯಲ್ಲಿ ಬದುಕಿ ನಾದ್ಯಂತ ಕನ್ನಡದ ಸೇವೆ ಮಾಡಿದ್ದು ಈ ಮೂರು ಜನ ಕನ್ನಡಪರ ಹೋರಾಟಗಾರರ ಹೆಸರನ್ನು ಬೆಳಗಾವಿ ಮಹಾನಗರದ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡುವಂತೆ ವಾಟಾಳ್ ನಾಗರಾಜ್ ಒತ್ತಾಯಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *