ಬೆಳಗಾವಿ:ಎರಡನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಸ್ಟಾರ್ ಏರ್ಲೈನ್ಸ್ ಸಂಸ್ಥೆ ಇಂದಿನಿಂದ ಬೆಳಗಾವಿ-ನಾಸಿಕ್ ಮಾರ್ಗ ಮಧ್ಯೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಸ್ಟಾರ್ ಏರ್ಲೈನ್ಸ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಂದಿನಿಂದಲೇ ವಿಮಾನ ಸೇವೆ ಆರಂಭವಾಗಲಿದೆ. ಉಡಾನ್ ಯೋಜನೆಯಡಿ ಸ್ಟಾರ್ ಏರ್ಲೈನ್ಸ್ ತನ್ನ ಸೇವೆ ವಿಸ್ತರಿಸುತ್ತಿದೆ ಎಂದರು.
ಸ್ಟಾರ್ ಏರ್ಲೈನ್ಸ್ ಈಗಾಗಲೇ ಅಹ್ಮದಾಬಾದ್, ಅಜ್ಮೀರ್, ಬೆಂಗಳೂರು, ದೆಹಲಿ, ಬೆಳಗಾವಿ, ಹುಬ್ಬಳ್ಳಿ, ತಿರುಪತಿ, ಇಂದೋರ್, ಕಲಬುರ್ಗಿ, ಮುಂಬೈ, ಸೂರತ್ ಸೇರಿ 13 ಸ್ಥಳಗಳಿಗೆ ನಿತ್ಯ 26 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ನಾಸೀಕ್ ಗೂ ವಿಮಾನ ಸೇವೆ ವಿಸ್ತರಿಸಲಾಗಿದೆ ಎಂದು ಘೋಡಾವತ್ ಹೇಳಿದರು.
ಈವರೆಗೆ ಸ್ಟಾರ್ ಏರ್ಲೈನ್ಸಿನಲ್ಲಿ 1.6 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಸ್ಟಾರ್ ಏರ್ಲೈನ್ಸ್ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಿದೆ ಎಂದರು
ಸ್ಟಾರ್ ಏರ್ ನಾಲ್ಕು ವಿಮಾನಗಳನ್ನು ಹೊಂದಿದೆ,ಈ ನಾಲ್ಕು ವಿಮಾನಗಳು 26 ರೂಟ್ ಗಳಲ್ಲಿ ಸೇವೆ ಮಾಡುತ್ತಿವೆ ಸರ್ಕಾರದ ಒಡಂಬಡಿಕೆಯಂತೆ ಶೇ 80 ರಷ್ಟು ರೂಟ್ ಗಳಲ್ಲಿ ವಿಮಾನ ಸೇವೆ ಆರಂಭಿಸಿದ್ದೇವೆ ಶೀಘ್ರದಲ್ಲಿಯೇ ಇನ್ನೊಂದು ಅತ್ಯಾಧುನಿಕ ವಿಮಾನ ಸ್ಟಾರ್ ಏರ್ ಗೆ ಸೇರ್ಪಡೆಯಾಗಲಿದ್ದು ಶೀಘ್ರದಲ್ಲಿಯೇ ಬೆಳಗಾವಿ ಜೋಧಪೂರ ಮತ್ತು ಬೆಳಗಾವಿ ನಾಗಪೂರ ನಡುವೆ ವಿಮಾನ ಸೇವೆ ಒದಗಿಸುವ ಗುರಿ ಇದೆ ಸ್ಟಾರ್ ಏರ್ ನಿರ್ದೇಶಕ ಶ್ರೇಣಿಕ್ ಘೋಡಾವತ್ ಹೇಳಿದರು,
ಕಾರ್ಗೋ ವಿಮಾನದ ಅನುಮತಿ ಸಿಕ್ಕಿದೆ
ಸ್ಟಾರ್ ಏರ್ ಕಾರ್ಗೋ ವಿಮಾನ ಸೇವೆ ಒದಗಿಸುವ ಅನುಮತಿ ಪಡೆದಿದೆ,ಬೆಳಗಾವಿಯಿಂದ ಈ ಸೇವೆ ಆರಂಭಿಸಲು ಏರ್ ಪೋರ್ಟ್ ಅಥೋರಿಟಿ ಅನುಮತಿ ನೀಡಬೇಕು ಈ ಕಾರ್ಯವನ್ನು ಬೆಳಗಾವಿ ವಿಮಾನ ನಿಲ್ಧಾಣದ ಮೌರ್ಯ ಅವರು ತುಂಬಾ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದಾರೆ, ಎಂದು ಶ್ರೇಣಿಕ್ ಘೋಡಾವತ್ ಹೇಳಿದರು,ಬೆಳಗಾವಿ ನಮ್ಮ ಸಂಸ್ಥೆಯ ನೆಕ್ಷ್ಟ್ ಬ್ಯಸಿನೆಸ್ ಸೆಕ್ಟರ್ ಆಗಿದೆ ಸ್ಟಾರ್ ಉದ್ಯೋಗ ಸಮೂಹ ಮುಂದಿನ ದಿನಗಳಲ್ಲಿ ಬೆಳಗಾವಿಯ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲೇ ಅನೇಕ ಯೋಜನೆಗಳನ್ನು ಶುರು ಮಾಡಲಿದೆ ಎಂದು ಶ್ರೇಣಿಕ ಘೋಡಾವತ್ ಹೇಳಿದರು
ಸ್ಟಾರ್ ಏರ್ ಇಂದು ಎರಡನೇಯ ವಾರ್ಷಿಕೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಸ್ಟಾರ್ ಏರ್ ನಿರ್ದೇಶಕ ಶ್ರೇಣಿಕ ಘೋಡಾವತ್ ಮತ್ತು ಸಂಸ್ಥೆಯ ಇತರ ಪ್ರಭಾರಿಗಳು ಕೇಕ್ ಕತ್ತರಿಸಿ ಸಂಬ್ರಮಿಸಿದರು.