ಬೆಳಗಾವಿ-ಬೆಳಗಾವಿ ಗಡಿ ವಿಚಾರದಲ್ಲಿ ಮಹಾರಾಷ್ಟ್ರದಿಂದ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಖ್ರೆ ಮತ್ತೊಂದು ಕ್ಯಾತೆ ತೆಗೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಮತ್ತೊಮ್ಮೆ ಕಾಲು ಕೆದರಿ ಜಗಳಕ್ಕೆ ಬರೋಕೆ ಮಹಾರಾಷ್ಟ್ರ ಸಿದ್ಧ ಮಾಡಿಕೊಂಡಿದ್ದು,
ಗಡಿ ವಿವಾದಿತ ವಿಚಾರ ಒಳಗೊಂಡ ಪುಸ್ತಕ ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಮಹಾರಾಷ್ಟ್ರ ಸರ್ಕಾರದಿಂದಲೇ ಸಿದ್ಧಗೊಂಡಿರೋ ಗಡಿ ವಿವಾದ ಕುರಿತ ಪುಸ್ತಕವನ್ನು ನಾಳೆ ಬಿಡುಗಡೆಯಾಗಲಿದೆ.ವಿಚಾರ ಒಗ್ಗಟ್ಟು ತೋರಿಸಲು ಮಹಾ ನಾಯಕರ ಸಿದ್ಧತೆ ಮಾಡಿಕೊಂಡಿದ್ದಾರೆ.
ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಸಿಎಂ ಉದ್ಧವ ಠಾಕ್ರೆ, ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಭಾಗಿಯಾಗುತ್ತಾರೆ.ಮಹಾರಾಷ್ಟ್ರ ಕರ್ನಾಟಕ ಸೀಮಾವಾದ- ಸಂಘರ್ಷ ಆನಿ ಸಂಕಲ್ಪ’ ಎನ್ನುವ ಪುಸ್ತಕ ಇದಾಗಿದ್ದು ಪುಸ್ತಕದಲ್ಲಿ ಅನೇಕ ವಿವಾದಿತ ವಿಚಾರಗಳಿವೆ ಎನ್ನುವ ಮಾಹಿತಿ ಇದೆ ಕೆಲ ದಿನಗಳ ಹಿಂದೆ ಟ್ವಿಟ್ ಮಾಡುವ ಮೂಲಕ ಠಾಕ್ರೆ ವಿವಾದ ಹುಟ್ಟಿ ಹಾಕಿದ್ದರು ಈಗ ಸೀಮಾ ಸಂಘರ್ಷ ಎನ್ನುವ ಪುಸ್ತಕ ಬಿಡುಗಡೆ ಮಾಡಿ ಮಹಾರಾಷ್ಟ್ರ ಸರ್ಕಾರ ಭಾರತದ ಒಕ್ಕೂಟದ ವ್ಯೆವಸ್ಥೆಯನ್ನೇ ಹಾಳು ಮಾಡಲು ಹೊರಟಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಂಬಯಿ ಮಂತ್ರಾಲಯದಲ್ಲಿ ನಾಳೆ ಮದ್ಯಾಹ್ನ 12-00 ಗಂಟೆಗೆ ನಡೆಯಲಿದೆ.