ಬೆಳಗಾವಿ-ಮುಂಬೈನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಬೆಳಗಾವಿ ಗಡಿವಿವಾದದ ಕುರಿತು ಸರ್ಕಾರವೇ ರಚಿಸಿದ ಪುಸ್ತಕ ಬಿಡುಗಡೆ ಮಾಡಿ ಮತ್ತೇ ಕಾಲು ಕೆದರಿ ಜಗಳ ಶುರು ಮಾಡಿದ್ದಾರೆ.
ಮಹಾರಾಷ್ಟ್ರ ಕರ್ನಾಟಕ ಸೀಮಾವಾದ ಸಂಘರ್ಷ ಅನೀ, ಸಂಕಲ್ಪ ಪುಸ್ತಕ ಬಿಡುಗಡೆಗೊಳಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ ಠಾಖ್ರೆ ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಪ್ರಚೋದನಾತ್ಮಕ ಪುಸ್ತಕ ಬಿಡುಗಡೆ ಮಾಡಿ ಪ್ರಚೋದನಾಕಾರಿ ಭಾಷಣ ಮಾಡುವ ಮೂಲಕ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ.
ಬೆಳಗಾವಿ ಗಡಿ ವಿವಾದವನ್ನು ಕೋರ್ಟ್ ನಲ್ಲಿ ಗೆಲ್ಲುತ್ತೇವೆ.ಬೆಳಗಾವಿಯಲ್ಲಿ ಮತ್ತೆ ಮರಾಠಿ ಎಂ ಎಲ್ ಎಗಳು ಆಯ್ಕೆ ಆಗಬೇಕು.ಮರಾಠಿ ಭಾಷಿಕರ ಮೇಲೆ ಕರ್ನಾಟಕ ದ್ರೋಹದ ಕೇಸ್ ಹಾಕಲಾಗುತ್ತದೆ. ನಾವೇನು ಪಾಕಿಸ್ತಾನದ ಪರ ಘೋಷಣೆ ಹಾಕಿದ್ದೀವಾ?
ಮಾತೃಭಾಷೆ ನಮ್ಮ ಹೋರಾಟ ಇದೆ. ಮರಾಠಿ ಭಾಷಿಕರ ಮೇಲೆ ನಿರಂತರ ಅನ್ಯಾಯ ನಡೆದಿದೆ ಎಂದು ಮಹಾರಾಷ್ಟ್ರ ಸಿಎಂ ಮುಂಬಯಿ ಯಲ್ಲಿ ಪುಸ್ತಕ ಬಿಡುಗಡೆ ಮಾಡಿ ಈ ರೀತಿಯ ಭಾಷಣ ಮಾಡಿದ್ದಾರೆ.
ನಮ್ಮ ಭಿನ್ನಮತ್ತದ ಲಾಭ ಕರ್ನಾಟಕ ಸರ್ಕಾರ ಪಡೆಯುತ್ತಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರೋ ವರಗೆ ನಮ್ಮ ಹೋರಾಟ ನಿರಂತರ ನಡೆಯುತ್ತದೆ ಎಂದು ಉದ್ಧವ ಠಾಖ್ರೆ ಹೇಳಿದ್ದಾರೆ.
ಶಿವಸೇನೆಗೆ ಸಾಹುಕಾರ್ ಟಾಂಗ್..
ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಪುಸ್ತಕ ಬಿಡುಗಡೆ ವಿಚಾರವಾಗಿ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಸೇನೆಗೆ ಪ್ರಚೋದನೆ ಮಾಡೊದು ಮುಖ್ಯ ಅಜೆಂಡಾ, ಶಿವಸೇನೆ ಜನಪ್ರಿಯತೆ ಕುಗ್ಗುತ್ತಿದೆ. ಜನರ ದಿಕ್ಕು ತಪ್ಪಿಸಲು ಶಿವಸೇನೆ ಯತ್ನಸುತ್ತಿದೆ
ಕರ್ನಾಟಕ ಸೌಹಾರ್ದತೆಯಿಂದ ಬದುಕುವ ಸ್ಥಳ.
ನಮ್ಮಲ್ಲಿ ಬೇಧವಾವ, ತಾರತಮ್ಯ ಇಲ್ಲ.
ಉದ್ಧವ ಠಾಕ್ರೆ ಎಲ್ಲಾ ರಂಗದಲ್ಲಿ ವಿಫಲವಾಗಿದ್ದು
ಗಡಿ ವಿಚಾರವನ್ನು ಕೆದಕಿ ಜನರ ಮನಸ್ಸ ಸೆಳೆಯಲು ಶಿವಸೇನೆ ಕುತಂತ್ರ ನಡೆಸಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯ ಇಲ್ಲ.
ಮಹಾಜನ ವರದಿ ಈಗಾಗಲೇ ಒಪ್ಪಲಾಗಿದೆ.
ಮಹಾರಾಷ್ಟ್ರ ಮುಂಬೈನಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶನ.ನಮ್ಮಲ್ಲಿ ನಾವು ಎಲ್ಲಾ ಪಕ್ಷದ ನಾಯಕರು ಗಡಿ ವಿಚಾರದಲ್ಲಿ ಒಂದೇ ಇದ್ದೇವೆ.
ರಾಜ್ಯದಲ್ಲಿ ಗಡಿ ಉಸ್ತುವಾರಿ ಸಚಿವರ ನೇಮಕ ಅಗತ್ಯ ಇಲ್ಲ.ನಾವೇಲ್ಲ 34 ಜನ ಸಚಿವರು ಗಡಿ ವಿಚಾರಕ್ಕೆ ಬದ್ಧವಾಗಿ ಇದ್ದೇವೆ.ಶಿವಸೇನೆ ಅಜೆಂಡಾ ಗಡಿ ವಿವಾದ ಇದೆ.ಪುಸ್ತಕ ಬಿಡುಗಡೆ ಹೆಚ್ಚಿನ ಮಹತ್ವ ಕೊಡಬೇಡಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಗಡಿ ವಿವಾದದ ಕುರಿತು ಸಚಿವ ಶ್ರೀಮಂತ ಪಾಟೀಲ ಹೇಳಿಕೆ
ರಾಜ್ಯ ದೃಷ್ಟಿಯಿಂದ ಗಡಿ ವಿಚಾರ ಮುಗಿದ ಅಧ್ಯಾಯ.ರಾಜಕೀಯ ಉದ್ದೇಶದಿಂದ ಗಡಿ ಕ್ಯಾತೆ ನಡೆಯುತ್ತಿದೆ. ಎಂಇಎಸ್ ನಿಷೇಧ ವಿಚಾರ.ರಾಜ್ಯದ ವಿರುದ್ಧ ಎನಾದ್ರು ಮಾಡಿದ್ರೆ ನಿಷೇಧ. ಅಂತಹ ಯಾವುದೇ ಪ್ರಕರಣ ಕಂಡು ಬಂದಿಲ್ಲ. ನಮ್ಮ ಗಮನಕ್ಕೆ ಎಂಇಎಸ್ ಪುಂಡಾಟ ಕಂಡು ಬಂದಿಲ್ಲ..ಎಂಇಎಸ್ ಮುಗಿದು ಹೋದ ಅಧ್ಯಾಯ.ಎಂಇಎಸ್ ಪ್ರಭಾವ ಗಡಿಯಲ್ಲಿ ಕಡಿಮೆಯಾಗಿದೆ. ಮುಗಿದು ಹೋಗಿರೋ ವಿಷಯಕ್ಕೆ ಹೆಚ್ಚಿನ ಮಹತ್ವ ಬೇಡ ಎಂದರು ಶ್ರೀಮಂತ ಪಾಟೀಲ