Breaking News

ಕುಂದಾನಗರಿ ಬೆಳಗಾವಿಯಲ್ಲಿ , ಸುಗ್ಗಿ ಹುಗ್ಗಿ ಜನಪದ

ಬೆಳಗಾವಿ : “ಮಿತಿ ಮೀರಿದ ಯಾಂತ್ರೀಕರಣದಿಂದಾಗಿ ಪ್ರಸ್ತುತ ದಿನಗಳಲ್ಲಿ ಹಳ್ಳಿ ಸೊಬಗು ಕಾಣುವದು ಅಪರೂಪವಾಗಿದೆ. ಸುಗ್ಗಿ ಹುಗ್ಗಿಯಂತಹ ಜನಪದ ಕಲೆಗಳ ಸಂಭ್ರಮಗಳ ಮೂಲಕ ಗ್ರಾಮೀಣ ಕಲೆ ಮತ್ತು ಸೊಗಡು ಎಲ್ಲೆಡೆ ಪಸರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರವಿವಾರ (ಜ.31)ರಂದು ಕುಮಾರ ಗಂಧರ್ವ ರಂಗಮಂದಿರದ ಹೊರಾಂಗಣದಲ್ಲಿ ಏರ್ಪಡಿಸಲಾಗಿದ್ದ ಸುಗ್ಗಿ ಹುಗ್ಗಿ- 2020 ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನ

ಕಳೆದ ಒಂದು ವರ್ಷಗಳಿಂದ ಕೋವಿಡ್ 19 ಮಹಾ ಮಾರಿಯಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗಿಲ್ಲ. ಆದರೆ ಸದ್ಯದಲ್ಲಿಯೇ ಕೊರೊನಾ ಕರಿಛಾಯೆಯಿಂದ ಹೊರಬರಲಿದ್ದೇವೆ.

ಎಲ್ಲಾ ದೇವಾಲಯ ಚರ್ಚ್ ಹಾಗೂ ಮಸೀದಿಗಳ ಪ್ರವೇಶಕ್ಕೆ ನಾವು ಷರತ್ತು ಬದ್ಧ ಅನುಮತಿಯನ್ನು ನೀಡುತ್ತಿದ್ದು, ಮುಂದಿನ ತಿಂಗಳಿಂದ ಎಲ್ಲ ದೇವಸ್ಥಾನದ ಚರ್ಚ್ ಮಸೀದಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಿದರು.

ನಗರಗಳಲ್ಲಿ ಜಾನಪದ ಸೊಗಡು ನೋಡುವುದು ಅತಿ ವಿರಳ ಹಾಗೂ ನಮ್ಮ ನಾಡಿನ ಗ್ರಾಮೀಣ ಪ್ರದೇಶದ ಜನಪದ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಉಳಿಸುವ ಒಂದು ಜವಾಬ್ದಾರಿ ನಮ್ಮದಾಗಿದೆ. ಅಂತಹ ಕಲೆಗಳನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಕೆಲಸವನ್ನು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಿ ಪೋಷಿಸುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ ಎಂದು ಕಾರಂಜಿಮಠದ ಗುರುಸಿದ್ದ ಮಹಾಸ್ವಾಮಿಗಳು ಹೇಳಿದರು.

ಸಂಸ್ಕೃತಿ ಸಾಹಿತ್ಯ ಕಲೆ ಇವೆಲ್ಲವೂ ಕೇವಲ ಭಾರತದಲ್ಲಿ ಮಾತ್ರ ಸಿಗುತ್ತವೆ . ಹಾಗೂ ಮುಂದಿನ ಪೀಳಿಗೆಗಳಿಗೆ ಇದನ್ನು ತಿಳಿಸುವ ಕೆಲಸವನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಖೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಜಾನಪದ ಲೋಕವೇ ಧರೆಗೆ ಇಳಿದಂತೆ ಭಾಸವಾಗುತ್ತಿದೆ
ದೇಶೀಯ ಒಂದು ಸಂಸ್ಕೃತಿಯನ್ನು ಬಿಂಬಿಸುವ ಒಂದು ಕಾರ್ಯಕ್ರಮ ಈ ಸುಗ್ಗಿ ಹುಗ್ಗಿ ಜಾನಪದ ಕಲಾ ಸಂಭ್ರಮ ವಾಗಿದೆ ಎಂದು ಗದುಗಿನ ತೋಂಟದ ಶ್ರೀಗಳು ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಹಳ್ಳಿ ಗ್ರಾಮೀಣ ಪ್ರದೇಶದಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಯಾಂತ್ರೀಕರಣ ಪ್ರಭಾವದಿಂದ ಈ ಎಲ್ಲಾ ಒಂದು ಕಲೆಗಳು ಮರೆಯಾಗುತ್ತಿವೆ. ಇಂತಹ ಕಲೆಗಳು ಉಳಿಸುವ ಒಂದು ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಹೇಳಿದರು.

ಇಂಥಹ ಕಾರ್ಯಕ್ರಮಗಳಿಂದ ಜಾನಪದ ಕಲೆಗಳನ್ನು ಉಳಿಸುವ ಕೆಲಸವನ್ನು ನಾವು ಇಂದು ಮಾಡಬೇಕು ಎಂದು ಹೇಳಿದರು.

ಇದಕ್ಕೂ ಮುಂಚೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸುಗ್ಗಿ ಹುಗ್ಗಿ 2020 ಗ್ರಾಮೀಣ ಜಾನಪದ ಕಲಾಸಂಭ್ರಮ ಮೆರವಣಿಗೆ ಶಾಸಕ ಅನಿಲ್ ಬೆನಕೆ ಹಾಗೂ ಜಿಲ್ಲಾಧಿಕಾರಿ ಹಿರೇಮಠ ಚಾಲನೆ ನೀಡಿದರು.
ಕಲಾ ತಂಡಗಳು ಹಲವಾರು ಕಲೆಗಳ ಮುಖಾಂತರ ಮೆರವಣಿಗೆಗೆ ರಂಗು ನೀಡಿದವು.

ಕಾರ್ಯಕ್ರಮದಲ್ಲಿ ಶಹನಾಯಿ ವಾದನ, ಜನಪದ ಸಂಗೀತ, ಡೊಳ್ಳು ಕುಣಿತ, ಗಿಗಿ ಪದ, ತತ್ವಪದ, ಭಜನಾಪದ, ಜಾನಪದ, ನೃತ್ಯ, ಸೋಬಾನಪದ, ಸಮೂಹ ನೃತ್ಯ, ಸುಗಮ ಸಂಗೀತ , ಜಾನಪದ ಸಂಗೀತ , ರೂಪಕ ಗಳು, ಭಾವಗೀತೆಗಳು ಹಲವಾರು ಜಾನಪದ ಕಲೆಗಳನ್ನು ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ಪ್ರಸ್ತುತ ಪಡಿಸಲಾಯಿತು.

ಸಂಗೀತ ಕಲಾವಿದೆ ಮಂಗಳಾ ಮಠದ, ಜ್ಯೋತಿ ಭಾವಿಕಟ್ಟಿ, ಯಲ್ಲಪ್ಪ ಹುದಲಿ, ಶ್ರೀರಂಗ ಜೋಶಿ, ಶಿವಲಿಂಗ ಪೂಜಾರ, ಜಯಾನಂದ ಮಾದರ್, ಕೆಂಪವ್ವ ಹರಿಜನ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.
***

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *