Breaking News

ಇವತ್ತಿನಿಂದ ಥೇಟರ್ ಶೂರು ಆದ್ರೂ ಶೋ ಇಲ್ಲ….

ಬೆಳಗಾವಿ- ಕೇಂದ್ರ ಸರ್ಕಾರದ ಕೋವೀಡ್ ನಿಯಮಾವಳಿ ಯಂತೆ ಇಂದಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಸುಪ್ರಸಿದ್ಧ ಯಲ್ಲಮ್ಮ ದೇವಿಯ ಮಂದಿರ ಸಾರ್ವಜನಿಕರ ದರ್ಶನಕ್ಕೆ ಓಪನ್ ಆಗಿದೆ.

ಸವದತ್ತಿ ಯಲಮ್ಮ ದೇವಿಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳ ದರ್ಶನಕ್ಕೆ ಮಂದಿರವನ್ನು ಓಪನ್ ಮಾಡಲಾಯಿತು, ಇಂದಿನಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರಸಿದ್ಧ ಮಂದಿರ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಿದ್ದು,ಜಿಲ್ಕೆಯಲ್ಲಿ ಪ್ರಥಮ ಪಿಯುಸಿ ತರಗತಿಗಳು ಶುಭಾರಂಭಗೊಂಡವು.

ಇಂದಿನಿಂದ ಬೆಳಗಾವಿ ನಗರದ ಚಿತ್ರಮಂದಿರಗಳು ಬಾಗಿಲು ತೆರದಿದ್ದು ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾ ನೋಡುವ ಅವಕಾಶ ಸಿಕ್ಕಿತು,ಹಲವಾರು ಚಿತ್ರಮಂದಿರಗಳಲ್ಲಿ ಸಿನೆಮಾ ಗಳು ಇಲ್ಲದೇ ಇರುವದರಿಂದ,ಈಗ ಸದ್ಯಕ್ಕೆ ಯಾವುದೇ ಚಿತ್ರಗಳು ಬಿಡುಗಡೆ ಆಗದೇ ಇರುವದರಿಂದ ಬೆಳಗಾವಿ ನಗರದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆಗಲೇ ಇಲ್ಲ.

ಪೆಬ್ರುವರಿ ಮೂರನೇಯ ವಾರದಲ್ಲಿ ಕನ್ನಡ ಮತ್ತು ಹಿಂದಿ ಚಲನಚಿತ್ರಗಳು ಬಿಡುಗಡೆ ಆಗಲಿದ್ದು ಹೊಸ ಚಿತ್ರಗಳುby ಬಿಡುಗಡೆಯಾದ ಬಳಿಕ ಬೆಳಗಾವಿ ನಗರದ ಎಲ್ಲ ಥೇಟರ್ ಗಳು ಪೂರ್ಣಪ್ರಮಾಣದಲ್ಲಿ ಶುರುವಾಗಲಿವೆ.

ಈಗ ಸದ್ಯಕ್ಕೆ,ಗ್ಲೋಬ್ ಚಿತ್ರಾ ಮತ್ತು ಐನಾಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಶೋ ಶುರುವಾಗಿದ್ದು ನರ್ತಕಿ ಸ್ವರೂಪ ಸೇರಿದಂತೆ ಇತರ ಚಿತ್ರಮಂದಿರಗಳಲ್ಲಿ ಶೋ ಶುರು ಆಗಿಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *