ಬೆಳಗಾವಿ-ರೈತರನ್ನು ಉಗ್ರವಾದಿಗಳು ಎಂದು ನಟಿ ಕಂಗನಾ ರಣಾವತ್. ಹೇಳಿಕೆ ನೀಡಿದ್ದು, ಬೆಳಗಾವಿಯ ವಕೀಲರೊಬ್ಬರು,ಬಾಲಿವುಡ್ ನಟಿ ಕಂಗನಾ ರಣಾವತ ವಿರುದ್ಧ ಕಂಪ್ಲೇಂಟ್ ಕೊಟ್ಟಿದ್ದಾರೆ.
ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ನಟಿ ಕಂಗನಾ ವಿರುದ್ಧ,ವಕೀಲ ಹರ್ಷವರ್ಧನ ಪಾಟೀಲ್ ಪೋಲೀಸರಿಗೆ ದೂರು ನೀಡಿದ್ದಾರೆ.ಸದ್ಯ ಟಿಳಕವಾಡಿ ಪೊಲೀಸರು ದೂರು ಸ್ವೀಕರಿಸಿದ್ದು ನಟಿ ಕಂಗನಾ ವಿರುದ್ಧ ತಕ್ಷಣ FIR ದಾಖಲಿಸಬೇಕು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಸೆಕ್ಷನ್ 153, 154A, 503, 504, 505(1), 505(B), 505(C), 505(2), 506 IPC ಅಡಿ ಕೇಸ್ ದಾಖಲು ಮಾಡಿಕೊಳ್ಳಬೇಕು,FIR ದಾಖಲು ಆಗದೇ ಇದ್ರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ವಕೀಲ ಹರ್ಷವರ್ದನ್ ತಿಳಿಸಿದ್ದಾರೆ.
ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ.
ಆದರೇ ಇದು ದುಪಯೋಗ ಆಗಬಾರದು,ಟ್ವಿಟರ್ ನಿಂದ ನಟಿ ರಣಾವತ್ ಬ್ಯಾನ್ ಮಾಡಬೇಕೆಂದು ಒತ್ತಾಯಿಸಲಾಗಿದೆ.ರೈತರ ವಿರುದ್ಧ ಟ್ವೀಟ್ ಮಾಡಿರುವ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ಆಕ್ರೋಶ ವ್ಯೆಕ್ತವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ