ಬೆಳಗಾವಿ- ಲೋಕಸಭೆಯಲ್ಲಿ ಇಂದು ನಡೆಬಾರದ ಘಟನೆ ನಡೆದು ಹೋಯಿತು.ಶಿವಸೇನೆ ಸಂಸದನೊಬ್ಬ ಬೆಳಗಾವಿ ಕಾರವಾರ ನಿಪ್ಪಾಣಿ ಪ್ರದೇಶಗಳು ಕೇಂದ್ರಾಡಳಿತ ಪ್ರದೇಶ ಆಗಲೇಬೇಕು ಎಂದು ಒತ್ತಾಯ ಮಾಡಿದ್ರೂ ಕರ್ನಾಟಕದ ಯಾವೊಬ್ಬ ಸಂಸದನೂ ಅದಕ್ಕೆ ಅಡ್ಡಿ ಪಡಿಸಲಿಲ್ಲ,ರಾಜ್ಯದ ಕೋಟ್ಯಾಂತರ ಕನ್ನಡಿಗರು ಕ್ಷಮಿಸಲಾರದ ಘಟನೆ ಇಂದು ನಡೆದಿದೆ.
ಇವತ್ತು ಶಿವಸೇನೆಯ ಸಂಸದ, ರಾಹುಲ್ ಶೇವಾಲೆ ಎಂಬಾತ ಲೋಕಸಭೆಯಲ್ಲಿ ಮಾತಾಡಿ ಬೆಳಗಾವಿ ಕಾರವಾರ,ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಠರಾವ್ ಪಾಸ್ ಮಾಡಿದೆ ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ, ಕೋವೀಡ್ ನಿಂದಾಗಿ ವಿಚಾರಣೆ ನಡೆಯಲಿಲ್ಲ, ಈಗ ಸದ್ಯಕ್ಕೆ ಈ ವಿವಾದಿತ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಬೇಕು ಅಂತಾ ಹೇಳಿದ್ರೂ ಕರ್ನಾಟಕದ ಯಾವೊಬ್ಬ ಸಂಸದನೂ ಅದಕ್ಕೆ ಪ್ರತಿರೋಧ ಮಾಡಲಿಲ್ಲ.
ಕರ್ನಾಟಕದಿಂದ ಇಷ್ಟೊಂದು ಸಂಸದರನ್ನು ನಮ್ಮ ನಾಡಿನ ಜನ ಆಯ್ಕೆ ಮಾಡಿದ್ರೂ ಅವರ್ಯಾರು ಶಿವಸೇನೆ ಸಂಸದನ ಪ್ರಸ್ತಾಪಕ್ಕೆ ಅಡ್ಡಿ ಪಡಿಸಲಿಲ್ಲ ಇದು ಕರ್ನಾಟಕದ,ಕನ್ನಡಿಗರ ದುರ್ದೈವ ..