ಬೆಳಗಾವಿ- ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಹಾಕಿದ ಬೆನ್ನಲ್ಲಿಯೇ ಬೆಳಗಾವಿ ಖಾಕಿ ಪಡೆ ಇಂದು ಸಂಜೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ ಮಾಡಿ,ಸುಮಾರು ಐವತ್ತಕ್ಕೂ ಹೆಚ್ಚು ಪೋಲೀಸರು ಜೈಲಿನಲ್ಲಿ ಶೋಧ ಮಾಡಿದಾಗ ಸಿಕ್ಕಿದ್ದು ಒಂದೇ ಒಂದು ಮೋಬೈಲ್…
ಯಾಕಂದ್ರೆ ಹಿಂಡಲಗಾ ಜೈಲಿನಲ್ಲಿದ್ದ ರೌಡಿಯೊಬ್ಬ ಫೋನ್ ಮಾಡಿದ್ದು ಹೇಗೆ,ಜೈಲಿನಲ್ಲಿ ಫೋನ್ ಬಂದಿದ್ದು ಎಲ್ಲಿಂದ ಎಂದು ಮಾದ್ಯಗಳು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಧಾರಿಸಿಕೊಂಡ ಸಂಧರ್ಭದಲ್ಲಿಯೇ ಬೆಳಗಾವಿ ಪೋಲೀಸರು ದಾಳಿ ಮಾಡಿದ್ದರಿಂದ ಪೋಲೀಸರ ಕೈಗೆ ಕೇವಲ ಒಂದು ಮೋಬೈಲ್ ಮಾತ್ರ ಸಿಕ್ಕಿದೆ.
ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ವಿಕ್ರಂ ಅಮಟೆ ನೇತ್ರತ್ವದಲ್ಲಿ ಡಿಸಿಪಿ 2, ಎಸಿಪಿ 2, ಪಿಐ 8, ಪಿಎಸ್ಐ 8 ಮತ್ತು ಸಿಬ್ಬಂದಿ 55, ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ವಿಶೇಷ ಪರಿಶೀಲನಾ ಕಾರ್ಯಾಚರಣೆ ನಡೆಸಿರು. ಕಾರ್ಯಾಚರಣೆಯಲ್ಲಿ ಒಂದು ಮೊಬೈಲ್ ದೊರತಿದ್ದು, ಇದರ ಬಗ್ಗೆ ವಿಚಾರಾಣೆ ಮಾಡಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ