ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಮತ್ತೇ ಬಾಲಬಿಚ್ಚುತ್ತಿದೆ ಯಾಕಂದ್ರೆ ಇವತ್ತಿನ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದ್ದು ಇವತ್ತು ಒಂದೇ ದಿನ ಜಿಲ್ಲೆಯಲ್ಲಿ 15 ಸೊಂಕಿತರು ಪತ್ತೆಯಾಗಿದ್ದಾರೆ.
ಬೆಳಗಾವಿ ನಗರದಲ್ಲಿ 6,ಜನ ಸೊಂಕಿತರು,ಖಾನಾಪೂರ ತಾಲ್ಲೂಕಿನಲ್ಲಿ 6 ಜನ ಸೊಂಕಿತರು,ಗೊಕಾಕಿನಲ್ಲಿ ಒಂದು,ಹುಕ್ಕೇರಿಯಲ್ಲಿ ಒಂದು,ಸವದತ್ತಿಯಲ್ಲಿ ಒಂದು ಹೀಗೆ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 15 ಜನ ಕೋವೀಡ್ ಸೊಂಕಿತರು ಪತ್ತೆಯಾಗಿದ್ದಾರೆ.
ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಕೋವೀಡ್ ಮಹಾಮಾರಿಯ ಭೀತಿಹೆಚ್ಚಾಗಿದ್ದು,ಬೆಳಗಾವಿ ಜಿಲ್ಲೆಯಲ್ಲಿ ಅದರಲ್ಲೂ ಮಹಾರಾಷ್ಟ್ರದ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯದ ಗಡಿ ಪ್ರವೇಶ ಮಾಡುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದ್ದು,ಆರೋಗ್ಯ ತಪಾಸಣೆಗಾಗಿ ಚೆಕ್ ಪೋಸ್ಟಗಳನ್ಬು ತೆರೆಯಲಾಗಿದೆ.
ಬೆಳಗಾವಿ ಜಿಲ್ಲೆಯ ಜನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವದು ಅಗತ್ಯವಾಗಿದ್ದು,ಕಡ್ಡಾಯವಾಗಿ ಮಾಸ್ಕ ಧರಿಸಿ,ಸಾಮಾಜಿಕ ಅಂತರ ಕಾಯ್ದುಕೊಂಡು,ಸೈನಿಟೈಸರ್ ಬಳಕೆ ಮಾಡುವ ಮೂಲಕ ಮಹಾಮಾರಿಯಿಂದ ಬಚಾವ್ ಆಗಲು ಎಚ್ಚರಿಕೆ ವಹಿಸುವದು ಎಲ್ಲರ ಜವಾಬ್ದಾರಿ..